March 31, 2026
Tuesday, March 31, 2026
spot_img

ಕೊಚ್ಚಿಯ ಬಂದರಿನಲ್ಲಿ ಲಂಗರು ಹಾಕಿದ ಇರಾನ್ ನೌಕೆ: ಈ ಕುರಿತು ಕೇಂದ್ರ ಸಚಿವ ಎಸ್ ಜೈಶಂಕರ್ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಗಡಿಗೆ ಸಮೀಪದಲ್ಲಿದ್ದ ಇರಾನ್ ಹಡಗುಗಳಲ್ಲಿ ಒಂದು ಸಮಸ್ಯೆಗೆ ಸಿಲುಕಿದ್ದು, ಈ ವೇಳೆ ಕೊಚ್ಚಿಯ ಬಂದರಿನಲ್ಲಿ ನಿಲ್ಲಿಸಲು ವಿನಂತಿಯನ್ನು ಕಳುಹಿಸಿದಾಗ ಭಾರತವು ಮಾನವೀಯ ಆಧಾರದ ಮೇಲೆ ಅನುಮತಿ ನೀಡಿತು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.

ಯುಎಸ್-ಇಸ್ರೇಲ್ ಯುದ್ಧದ ಮಧ್ಯೆ, ಇರಾನಿನ ನೌಕಾ ಹಡಗನ್ನು ಕೊಚ್ಚಿಯ ಬಂದರಿನಲ್ಲಿ ನಿಲ್ಲಿಸಲು ಅನುಮತಿ ನೀಡಿದ ಭಾರತದ ನಿರ್ಧಾರದ ಕುರಿತು ಎಸ್ ಜೈಶಂಕರ್ ಅವರು 2026 ರೈಸಿನಿಯಾ ಡೈಲಾಗ್ ನಲ್ಲಿ ವಿವರಿಸಿದ್ದಾರೆ.

ನಮ್ಮ ಬಂದರಿಗೆ ಬರಲು ಬಯಸಿದೆ ಎಂದು ಇರಾನ್ ನಿಂದ ನಮಗೆ ಸಂದೇಶ ಬಂದಿತು. ಭಾರತದೊಳಗೆ ಕೆಲವು ದಿನಗಳ ಕಾಲ ಇರಬಹುದು ಎಂದು ಮಾರ್ಚ್ 1 ರಂದು ನಾವು ಹೇಳಿದ್ದೇವು. ತದನಂತರ ಅವರು ಕೊಚ್ಚಿಯಲ್ಲಿ ಲಂಗರು ಹಾಕಿದರು ಎಂದು ತಿಳಿಸಿದರು.

ಕಡಲ ಸಮರಭ್ಯಾಸ ಮಿಲನದಲ್ಲಿ ಪಾಲ್ಗೊಳ್ಳಲು ಇರಾನ್ ಹಡಗು ಬರುತಿತ್ತು. ಆದರೆ ಕಾರ್ಯಕ್ರಮ ಆಯೋಜನೆ ಸ್ಥಳದ ಬಗ್ಗೆ ಸರಿಯಾಗಿ ತಿಳಿಯದೆ ತಪ್ಪಾದ ಕಡೆಯಿಂದ ಬರುತ್ತಿದ್ದರು. ಭಾರತ ಆಯೋಜಿಸಿದ್ದ ನೌಕಾಪಡೆಗಳ ತಾಲೀಮು ‘ಮಿಲನ್‌’ನಲ್ಲಿ ಪಾಲ್ಗೊಂಡು ಮರಳುವ ವೇಳೆ ಹಡಗಿನ ಮೇಲೆ ಅಮೆರಿಕ ದಾಳಿ ನಡೆಸಿತ್ತು.

ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವಿನ ಯುದ್ಧದ ಸಂದರ್ಭದಲ್ಲಿ ಹಿಂದೂ ಮಹಾಸಾಗರದಲ್ಲಿ ಮೂರು ಇರಾನಿನ ಹಡಗುಗಳ ಸಂಚಾರ ಕುರಿತು ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಜೈಶಂಕರ್ ಈ ಮಾಹಿತಿ ನೀಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !