ಹಿಜಾಬ್ ಧರಿಸದ ಜರ್ನಲಿಸ್ಟ್ ಜೊತೆ ಸಂದರ್ಶನ ಬೇಡ ಎಂದ ಇರಾನ್ ಅಧ್ಯಕ್ಷ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಿಜಾಬ್ ವಿಷಯ ಎಲ್ಲೆಲ್ಲೂ ಚರ್ಚೆಯಲ್ಲಿದೆ. ಇದೀಗ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಹಿಜಾಬ್ ಧರಿಸಿದ ಜರ್ನಲಿಸ್ಟ್ ಜೊತೆ ಸಂವಾದ ನಿರಾಕರಿಸಿದ್ದಾರೆ.

ಇರಾನ್ ಅಧ್ಯಕ್ಷ ಅಮೆರಿಕದ ಪರ್ತರ್ಕೆ ಜೊತೆ ಸಂದರ್ಶನದಲ್ಲಿ ಭಾಗಿಯಾಗಬೇಕಿತ್ತು. ಆದರೆ ಹಿಜಾಬ್ ಹಾಕಿಲ್ಲ ಎಂದು ಸಂದರ್ಶನವನ್ನು ರದ್ದುಗೊಳಿಸಲಾಗಿದೆ. ಅಂತಾರಾಷ್ಟ್ರೀಯ ನ್ಯೂಸ್ ಚಾನೆಲ್ ನಿರೂಪಕಿ ಕ್ರಿಸ್ಟಿಯಾನೆ ಅಮನ್‌ಪೋರ್ ಜೊತೆ ಇದ್ದಕ್ಕಿದ್ದಂತೆ ಅಧ್ಯಕ್ಷ ರೈಸಿ ಸಂದರ್ಶನ ರದ್ದು ಮಾಡಿದ್ದಾರೆ.

ವಿಶ್ವಸಂಸ್ಥೆ ಸಾಮಾನ್ಯ ಸಭೆಯ 77ನೇ ಅಧಿವೇಶನ ನಡೆಯುತ್ತಿದ್ದು, ಇದರಲ್ಲಿ ಅಭ್ಯಕ್ಷ ಇಬ್ರಾಹಿಂ ಭಾಗಿಯಾಗಿದ್ದರು. ಇದರ ಬೆನ್ನಲ್ಲೇ ಸಂದರ್ಶನ ಏರ್ಪಡಿಸಲಾಗಿತ್ತು. ಇರಾನ್ ಅಧ್ಯಕ್ಷರ ಬರುವಿಕೆಗಾಗಿ 40 ನಿಮಿಷ ಕಾದಿದ್ದೆವು. ಆದರೆ ಸಂದರ್ಶನದಲ್ಲಿ ಭಾಗಿಯಾಗಿಲ್ಲ. ತಲೆಗೆ ಸ್ಕ್ರಾಫ್ ಹಾಕುವಂತೆ ನನ್ನ ಸಹಾಯಕರ ಬಳಿ ಹೇಳಿ ಕಳಿಸಿದ್ದರು. ನಾನು ಅದನ್ನು ನಿರಾಕರಿಸಿದೆ. ನ್ಯೂಯಾರ್ಕ್‌ನಲ್ಲಿ ಯಾವುದೇ ಸಂಪ್ರದಾಯವೂ ಇಲ್ಲ, ಕಾನೂನು ಇಲ್ಲ ಎಂದು ಪರ್ತಕರ್ತೆ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!