ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಇರಾನ್ ವಿರುದ್ಧ ಇಸ್ರೇಲ್ ಪ್ರತೀಕಾರದ ದಾಳಿ ನಡೆಸಿದ್ದು, ಶನಿವಾರ (ಅ.26)ಕೂಡ ಬೆಳಗ್ಗೆ ಸುಮಾರು 200 ಕ್ಷಿಪಣಿಗಳ ಮಳೆ ಸುರಿಸಿ ಇರಾನ್ ಮೇಲೆ ದಾಳಿ ನಡೆಸಿದೆ. ಈ ಬೆನ್ನಲ್ಲೇ ಇರಾನ್‌ನ ಸುಪ್ರೀಂ ಲೀಡರ್ ಮತ್ತೆ ಯುದ್ಧದ ಎಚ್ಚರಿಕೆ ನೀಡಿದ್ದಾರೆ.
ಇಸ್ರೇಲ್ ದಾಳಿ ಕುರಿತು ಭಾನುವಾರ ಮಾತನಾಡಿರುವ ದೇಶದ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮತ್ತೆ ಇಸ್ರೇಲ್ ಮೇಲೆ ಯುದ್ಧ ಮುಂದುವರಿಸುವ ಎಚ್ಚರಿಕೆ ನೀಡಿದ್ದಾರೆ. ಇರಾನ್ ತನ್ನ ಶಕ್ತಿಯನ್ನು ಇಸ್ರೇಲ್‌ಗೆ ಹೇಗೆ ಪ್ರದರ್ಶಿಸಬೇಕು ಎಂಬುದನ್ನು ಇರಾನ್ ಅಧಿಕಾರಿಗಳು ನಿರ್ಧರಿಸಬೇಕು. ಇಸ್ರೇಲ್ ಮಾಡಿದ ದುಷ್ಟತನವನ್ನು ಕ್ಷಮಿಸಲೇಬಾರದು ಎಂದು ಕರೆ ಕೊಟ್ಟಿದ್ದಾರೆ.