ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಗ್ದಾದ್‌ನಿಂದ ಚೀನಾದ ಗುವಾಂಗ್‌ಝೌಗೆ ತೆರಳುತ್ತಿದ್ದ ಇರಾಕ್ ಏರ್‌ವೇಸ್ ವಿಮಾನವೊಂದರಲ್ಲಿ ಪ್ರಯಾಣಿಕರೊಬ್ಬರು ಅಸ್ವಸ್ಥಗೊಂಡ ಕಾರಣ ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದೆ.ಆದ್ರೆ 16 ವರ್ಷದ ಇರಾಕ್ ನ ಯುವತಿ ನಗರದ ಆಸ್ಪತ್ರೆಯೊಂದಕ್ಕೆ ಕರೆದೊಯ್ದಿದಾಗ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
100 ಪ್ರಯಾಣಿಕರು ಮತ್ತು 15 ಸಿಬ್ಬಂದಿಯನ್ನೊಳಗೊಂಡ IA-473 ವಿಮಾನ ಮಾರ್ಗ ಬದಲಿಸಿ ಬುಧವಾರ ರಾತ್ರಿ 10:18 ಕ್ಕೆ ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗಿತ್ತು.
ವಿಮಾನ ನಿಲ್ದಾಣದಲ್ಲಿದ್ದ ವೈದ್ಯಕೀಯ ತಂಡ ತಕ್ಷಣವೇ ಯುವತಿ ಡೆರಾನ್ ಸಮೀರ್ ಅಹ್ಮದ್ ಅವರನ್ನು ಪರಿಶೀಲಿಸಿತು. ನಾಡಿಮಿಡಿತ ಕಂಡುಬಂದಿಲ್ಲ. ಯಾವುದೇ ಹೃದಯ ಬಡಿತ ಕಂಡುಬಂದಿಲ್ಲವೂ ನಂತರ ಹೆಚ್ಚಿನ ಪರೀಕ್ಷೆಗಾಗಿ ಹತ್ತಿರದ ಆಸ್ಪತ್ರೆಗೆ ಕಳುಹಿಸಿದರು ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ವಕ್ತಾರರು ತಿಳಿಸಿದ್ದಾರೆ.
ಗುರುವಾರ ಮುಂಜಾನೆ 1.18 ರ ಸುಮಾರಿಗೆ ಇಬ್ಬರು ಸಹ ಪ್ರಯಾಣಿಕರೊಂದಿಗೆ ಹದಿಹರೆಯದ ಯುವತಿಯನ್ನು ಎಎಐ ಆಂಬ್ಯುಲೆನ್ಸ್ ಮೂಲಕ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರು ಮೃತಪಟ್ಟಿರುವುದಾಗಿ ಆಸ್ಪತ್ರೆ ತಿಳಿಸಿದೆ ಎಂದು ಎಎಐ ಅಧಿಕಾರಿ ತಿಳಿಸಿದ್ದಾರೆ.