ಇರಾಕ್‌ನ ಟಿಕ್‌ಟಾಕ್ ಸ್ಟಾರ್‌ ಓಂ ಫಹಾದ್‌ ರನ್ನು ಗುಂಡಿಕ್ಕಿ ಭೀಕರ ಹತ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇರಾಕ್‌ನ ಟಿಕ್‌ಟಾಕ್ ತಾರೆ ಓಂ ಫಹಾದ್ ಅವರನ್ನು ಬಾಗ್ದಾದ್‌ನ ಜೊಯೌನಾ ನೆರೆಹೊರೆಯಲ್ಲಿ ತಡರಾತ್ರಿ ಗುಂಡಿಕ್ಕಿ ಕೊಲ್ಲಲಾಗಿದೆ. ತನ್ನ ಎಸ್ ಯುವಿಯಲ್ಲಿ ಕುಳಿತಿದ್ದ ಫಹಾದ್ ನನ್ನು ಕಪ್ಪು ಬಣ್ಣದ ಸೈಕಲ್ ನಲ್ಲಿ ಬಂದ ದುಷ್ಕರ್ಮಿಗಳು ಏಕಾಏಕಿ ಗುಂಡಿಕ್ಕಿ ಕೊಂದಿದ್ದಾರೆ.

ಈ ಘಟನೆಯ ವಿಡಿಯೋ ಕಣ್ಗಾವಲು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಹೇಯ ಕೃತ್ಯಕ್ಕೆ ಗೃಹ ಸಚಿವಾಲಯ ಪ್ರತಿಕ್ರಿಯಿಸಿದ್ದು, ಸೂಕ್ತ ತನಿಖೆ ನಡೆಸುವುದಾಗಿ ಘೋಷಿಸಿದೆ.

ಫಹಾದ್ ಅವರ ನಿಜವಾದ ಹೆಸರು ಘುಫ್ರಾನ್‌ ಸವಧಿ, ಟಿಕ್‌ಟಾಕ್‌ನಲ್ಲಿ ಪಾಪ್ ಸಂಗೀತಕ್ಕೆ ನೃತ್ಯ ಮಾಡುವ ವೀಡಿಯೊವನ್ನು ಶೇರ್‌ ಮಾಡುತ್ತಿದ್ದರು. ಅವರು ಪ್ರಸ್ತುತ 5 ಲಕ್ಷ ಚಂದಾದಾರರನ್ನು ಹೊಂದಿದ್ದಾರೆ. ಈಗ ಅವರ ಬರ್ಬರ ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸ್ ತನಿಖೆ ಮುಂದುವರಿದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!