ʼಕೋಬ್ರಾʼ ಟ್ರೇಲರ್‌ನಲ್ಲಿ ಮಿಂಚುಹರಿಸಿದ ಕ್ರಿಕೆಟಿಗ ಇರ್ಫಾನ್ ಪಠಾಣ್: ಮೆಚ್ಚುಗೆ ಸೂಚಿಸಿದ ರೈನಾ, ಉತ್ತಪ್ಪ, ಹೂಡಾ

ಹೊಸದಿಗಂತ ಡಿಜಟಲ್‌ ಡೆಸ್ಕ್‌
ಪ್ರಖ್ಯಾತ ನಟ ಚಿಯಾನ್ ವಿಕ್ರಮ್ ಅವರ ಮುಂಬರುವ ಆಕ್ಷನ್ ಥ್ರಿಲ್ಲರ್ ʼಕೋಬ್ರಾʼ ಚಿತ್ರದ ಬಹು ನಿರೀಕ್ಷಿತ ಟ್ರೈಲರ್ ಬಿಡುಗಡೆಯಾಗಿ ಅಭಿಮಾನಿಗಳ ಮನಗೆದ್ದಿದೆ. ಈ ಚಿತ್ರದ ಮೂಲಕ ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.
ಕೋಬ್ರಾ ಚಿತ್ರದಲ್ಲಿ ಚೈನೀಸ್ ಮುದುಕ, ರಾಕ್ ಬ್ಯಾಂಡ್ ಸಂಗೀತಗಾರ ಸೇರಿದಂತೆ ಚಿಯಾನ್ ವಿಕ್ರಮ್ ಕನಿಷ್ಠ ಏಳು ವಿಭಿನ್ನ ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಮೂಲಕ ನಟನಾಗಿ ಪಾದಾರ್ಪಣೆ ಮಾಡುತ್ತಿರುವ ಇರ್ಫಾನ್ ಪಠಾಣ್, ತನಿಖಾಧಿಕಾರಿಯ ಪಾತ್ರದಲ್ಲಿ ಮಿಂಚುತ್ತಿದ್ದಾರೆ.

ನಟನಾಗಿ ಇರ್ಫಾನ್ ಅವರ ಹೊಸ ಇನ್ನಿಂಗ್ಸ್‌ ಗೆ ಟೀಂ ಇಂಡಿಯಾ ಕ್ರಿಕೆಟಿಗರಾದ ಸುರೇಶ್ ರೈನಾ, ರಾಬಿನ್ ಉತ್ತಪ್ಪ ಮತ್ತು ದೀಪಕ್ ಹೂಡಾ ಮೆಚ್ಚುಗೆ ಸೂಚಿಸಿದ್ದಾರೆ.

“ಸಹೋದರ ಇರ್ಫಾನ್ ಪಠಾಣ್ ‘ಕೋಬ್ರಾ’ ಚಿತ್ರದಲ್ಲಿನ ನಿಮ್ಮ ಅಭಿನಯವನ್ನು ವೀಕ್ಷಿಸಲು ತುಂಬಾನೇ ಸಂತೋಷವಾಗಿದೆ. ಇದು ಸಂಪೂರ್ಣ ಸಾಹಸಮಯ ಚಿತ್ರದಂತೆ ತೋರುತ್ತಿದೆ. ನೀವು ಮತ್ತು ಇಡೀ ಚಿತ್ರತಂಡವು ಇದರಲ್ಲಿ ದೊಡ್ಡ ಯಶಸ್ಸನ್ನು ಸಾಧಿಸುತ್ತೀರೆಂಬ ನಂಬಿಕೆ ಇದೆ. ಚಿತ್ರ ವೀಕ್ಷಣೆಗೆ ಕಾಯಲು ಸಾಧ್ಯವಿಲ್ಲ!” ಎಂದು ಸುರೇಶ್ ರೈನಾ ಟ್ವೀಟ್ ಮಾಡಿದ್ದಾರೆ.

“ಈ ಡ್ಯಾಶರ್‌ ಬಗ್ಗೆ ಎಚ್ಚರದಿಂದಿರಿ! ಹೊಸ ಅವತಾರದಲ್ಲಿ ಮತ್ತೊಂದು ಪ್ರಯಾಣ ಆರಂಭಿಸಿದ ಸಹೋದರನಿಗೆ ಅಭಿನಂದನೆಗಳು. ನೀವು ತೆರೆಯ ಮೇಲೆ ಬಂದಾಗ ಶಿಳ್ಳೆಗಳನ್ನು ಕೇಳಿಸಿಕೊಳ್ಳುವುದನ್ನು ನಾನು ಕಾಯಲು ಸಾಧ್ಯವಿಲ್ಲ. ನಿಮಗೆ ಯಶಸ್ಸು ಸಿಗಲೆಂದು ಹಾರೈಸುತ್ತೇನೆ. ಲವ್ ಯು ಬ್ರದರ್ʼ ಎಂದು ರಾಬಿನ್ ಉತ್ತಪ್ಪ ಬರೆದುಕೊಂಡಿದ್ದಾರೆ.

ಈ ವಿಚಾರವಾಗಿ ಟ್ವೀಟ್ ಮಾಡಿರುವ ದೀಪಕ್ ಹೂಡಾ, “ಈ ಟ್ರೇಲರ್ ದಶಕದ ಹಿಂದೆ ನಡೆದಿದ್ದ ನಮ್ಮ ಸಂಭಾಷಣೆಯತ್ತ ನನ್ನನ್ನು ಕರೆದೊಯ್ದಿದೆ. ಆಗ ಇರ್ಫಾನ್ ಭಾಯ್ ಹೇಳಿದ್ದರು, ನಾನು ಜೀವನದಲ್ಲಿ ಎಲ್ಲವನ್ನೂ ಮಾಡಬಲ್ಲೆ “ಏಕೆಂದರೆ ನಾನು ಆಲ್ ರೌಂಡರ್”! ನೀವು ನಿಜವಾದ ಮಾತನ್ನೇ ಹೇಳಿದ್ದಿರಿ.. ನಿಮ್ಮ ಬೆಳ್ಳಿತೆರೆಯ ಚೊಚ್ಚಲ ಪ್ರವೇಶಕ್ಕಾಗಿ ಎದುರು ನೋಡುತ್ತಿದ್ದೇನೆ ಭಾಯ್.” ಎಂದು ಸಂಭ್ರಮವನ್ನು ಹಂಚಿಕೊಂಡಿದಾರೆ. ಕೋಬ್ರಾ ಆಗಸ್ಟ್ 31 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!