ದೆಹಲಿ ವಕ್ಫ್ ಮಂಡಳಿಯಲ್ಲಿನ ಅಕ್ರಮ: ಆಮ್ ಆದ್ಮಿ ಶಾಸಕ ಅಮಾನತುಲ್ಲಾ ಖಾನ್ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ದೆಹಲಿ ವಕ್ಫ್ ಮಂಡಳಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕ ಅಮಾನತುಲ್ಲಾ ಖಾನ್ ಅವರನ್ನು ದೆಹಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಂಧಿಸಿದೆ.
ಶಾಸಕ ಮತ್ತು ಅವರ ಸಹಾಯಕನ ನಿವಾಸಗಳ ಮೇಲೆ ಶೋಧದ ಸಮಯದಲ್ಲಿ ಖಾನ್ ವಿರುದ್ಧ ದೋಷಾರೋಪಣೆಯ ವಸ್ತುಗಳು ಮತ್ತು ಪುರಾವೆಗಳು ಪತ್ತೆಯಾದ ನಂತರ ಎಸಿಬಿಯಿಂದ ಬಂಧನವಾಗಿದೆ.
ಈ ಹಿಂದೆ, ಖಾನ್ ಸಹಾಯಕ ಮತ್ತು ವ್ಯವಹಾರ ಪಾಲುದಾರರ ಮನೆ ಮೇಲೆ ದಾಳಿ ನಡೆಸಿದಾಗ ಎಸಿಬಿ 12 ಲಕ್ಷ ಮೌಲ್ಯದ ನಗದು, ಪಿಸ್ತೂಲ್ ಮತ್ತು ಇತರ ದಾಖಲೆಗಳನ್ನು ವಶಪಡಿಸಿಕೊಂಡಿದೆ ಎಂದು ವರದಿಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಟ್ಲಾ ಹೌಸ್ ಮತ್ತು ಜಾಮಿಯಾ ನಗರ ಸೇರಿದಂತೆ ದೆಹಲಿಯ ನಾಲ್ಕು ಸ್ಥಳಗಳಲ್ಲಿ ಎಸಿಬಿ ಶೋಧ ನಡೆಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!