October 18, 2026
Sunday, October 18, 2026
spot_img

ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ: ಎಸ್‌.ಜಾನಕಿ ನಿಧನಕ್ಕೆ ಪ್ರಧಾನಿ ಮೋದಿ ತೀವ್ರ ಸಂತಾಪ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಖ್ಯಾತ ಹಿನ್ನೆಲೆ ಗಾಯಕಿ ಎಸ್‌ ಜಾನಕಿ ಅವರ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ಈ ಕುರಿತು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿರುವ ಅವರು, ಗಾನಕೋಗಿಲೆಯ ಅಗಲಿಕೆಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

ಸಂಗೀತ ಲೋಕಕ್ಕೆ ಅಪಾರ ನಷ್ಟ

ಪ್ರಧಾನಿಯವರು ತಮ್ಮ ಸಂದೇಶದಲ್ಲಿ, “ಖ್ಯಾತ ಗಾಯಕಿ ಎಸ್‌. ಜಾನಕಿ ಅಮ್ಮ ಅವರ ನಿಧನವು ಸಾಂಸ್ಕೃತಿಕ ಮತ್ತು ಸಂಗೀತ ಲೋಕಕ್ಕೆ ಎದುರಾಗಿರುವ ಅತಿ ದೊಡ್ಡ ಆಘಾತ ಹಾಗೂ ತುಂಬಲಾರದ ನಷ್ಟವಾಗಿದೆ. ವಿವಿಧ ಭಾಷೆಗಳಲ್ಲಿ ಅವರು ಹಾಡಿರುವ ಅಮರ ಗೀತೆಗಳು ತಲೆಮಾರುಗಳ ಕಾಲ ಜನರ ಮನಸ್ಸಿನಲ್ಲಿ ನೆಲೆಸಲಿವೆ,” ಎಂದು ಸ್ಮರಿಸಿದ್ದಾರೆ.

ಪ್ರತಿ ಭಾವಕ್ಕೂ ಧ್ವನಿಯಾದ ಗಾನಕೋಗಿಲೆ

ಮುಂದುವರಿದು ಮಾತನಾಡಿದ ಪಿಎಂ, “ಜಾನಕಮ್ಮ ತಮ್ಮ ಅದ್ಭುತ ಕಂಠಸಿರಿ ಹಾಗೂ ಗಾಯನ ಶೈಲಿಯ ಮೂಲಕ ಪ್ರತಿಯೊಂದು ಭಾವನೆಗೂ ಅತ್ಯಂತ ಸುಂದರವಾಗಿ ಜೀವ ತುಂಬುತ್ತಿದ್ದರು. ಅವರ ಮಧುರ ಧ್ವನಿ ಮುಂಬರುವ ದಿನಗಳಲ್ಲೂ ಕೇಳುಗರನ್ನು ಮಂತ್ರಮುಗ್ಧರನ್ನಾಗಿಸುವುದರಲ್ಲಿ ಸಂದೇಹವಿಲ್ಲ. ಈ ದುಃಖದ ಸಮಯದಲ್ಲಿ ಅವರ ಕುಟುಂಬಸ್ಥರು, ಅಪಾರ ಅಭಿಮಾನಿಗಳು ಹಾಗೂ ಸಂಗೀತ ಕ್ಷೇತ್ರಕ್ಕೆ ನನ್ನ ತೀವ್ರ ಸಂತಾಪಗಳು. ಓಂ ಶಾಂತಿ,” ಎಂದು ಪ್ರಾರ್ಥಿಸಿದ್ದಾರೆ.

Must Read