ಮೀಟರ್ ಬಡ್ಡಿ ವ್ಯವಹಾರ ನಡೆಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಉತ್ತರ ಕನ್ನಡ ಎಸ್ಪಿ

 ಹೊಸದಿಗಂತ ವರದಿ, ಅಂಕೋಲಾ:

ಉತ್ತರ ಕನ್ನಡ ಜಿಲ್ಲೆಯಲ್ಲಿ ಮೀಟರ್ ಬಡ್ಡಿ ವ್ಯವಹಾರ ನಡೆಸುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠ ಎಂ ನಾರಾಯಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈಗಾಗಲೇ ಜಿಲ್ಲೆಯ ಹಲವು ಕಡೆಗಳಲ್ಲಿ ಮೀಟರ್ ಬಡ್ಡಿ ವ್ಯವಹಾರದಲ್ಲಿ ತೊಡಗಿಕೊಂಡಿರುವವರ ಮೇಲೆ ಪ್ರಕರಣ ದಾಖಲಿಸಿ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗಿದ್ದು ಮುಂದಿನ ದಿನಗಳಲ್ಲಿ ಸಹ ಸಾಲ ನೀಡಿ ಮೀಟರ್ ಬಡ್ಡಿ ದಂಧೆ ನಡೆಸುವವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸಾಲಕ್ಕೆ ಹಣ ನೀಡಿ ಅದರ ಮೇಲೆ ವಿಪರೀತ ಬಡ್ಡಿ ವಿಧಿಸಿ ಬಡ್ಡಿಯ ಮೇಲೆ ಮತ್ತೆ ಬಡ್ಡಿ ಹಾಕಿ ಸಾಲ ತೆಗೆದುಕೊಂಡವರು ಬಡ್ಡಿ ಹಣ ನೀಡದಿದ್ದರೆ ಅವರಿಗೆ ಕಿರುಕುಳ ನೀಡುವುದು, ಬಡ್ಡಿ ವಸೂಲಾತಿಗೆ ಗೂಂಡಾಗಿರಿ ಮಾಡುವುದು ಚೆಕ್ ತೆಗೆದುಕೊಂಡು ಹೆದರಿಸುವುದು ಮೊದಲಾದ ಕೃತ್ಯಗಳನ್ನು ನಡೆಸುತ್ತಿರುವುದು ಪೊಲೀಸ್ ಇಲಾಖೆಯ ಗಮನಕ್ಕೆ ಬಂದಿದ್ದು ಈ ದಿಶೆಯಲ್ಲಿ ಬೀಟ್ ವ್ಯವಸ್ಥೆ ಮೂಲಕ ಬಡ್ಡಿ ಸಾಲದ ವ್ಯವಹಾರ ನಡೆಸುವವರ ಮಾಹಿತಿ ಕಲೆ ಹಾಕಲಾಗುತ್ತಿದೆ ಇದರಿಂದಾಗಿ ಹಲವು ಬಡ್ಡಿಕೋರರು ಊರು ಬಿಟ್ಟು ಪರಾರಿಯಾಗಿದ್ದಾರೆ ಎಂದು ತಿಳಿಸಿರುವ ಪೊಲೀಸ್ ವರಿಷ್ಠರು ಸಾರ್ವಜನಿಕರು ಯಾವುದೇ ರೀತಿಯ ಭಯ ಪಡದೇ ಅಕ್ರಮ ಸಾಲ ನೀಡಿ ಬಡ್ಡಿ ವಸೂಲು ಮಾಡುವವರ ಕುರಿತು ಜಿಲ್ಲಾ ಪೊಲೀಸ್ ವರಿಷ್ಠರ ಮೊಬೈಲ್ ಸಂಖ್ಯೆ 9480805201 ಅಥವಾ ಪೊಲೀಸ್ ಕಂಟ್ರೋಲ್ ರೂಮ್
08382 -226550 ಹಾಗೂ 223093 ಅಥವಾ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸ್ಥಾಪಿಸಿರುವ ಸಹಾಯವಾಣಿಗೆ ತೆರಳಿ ಮಾಹಿತಿ ನೀಡಬಹುದು ಎಂದು ಪೊಲೀಸ್ ವರಿಷ್ಠರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement - Ply

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!