Monday, October 2, 2023

Latest Posts

ನಟಿ ಮಲೈಕಾ ಅರೋರಾ ಗರ್ಭಿಣಿಯಾ?: ಅರ್ಜುನ್‌ ಕಪೂರ್‌ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬಾಲಿವುಡ್‌ ನಟ ಅರ್ಜುನ್‌ ಕಪೂರ್‌ (Arjun Kapoor) ಹಾಗೂ ನಟಿ ಮಲೈಕಾ ಅರೋರಾ ಪ್ರೀತಿಯಲ್ಲಿರುವ ವಿಚಾರ ಎಲ್ಲರಿಗೂ ಗೊತ್ತಿದೆ.

ಇದೀಗ ಈ ಜೋಡಿಯ ಕುರಿತು ಹೊಸದೊಂದು ವಿಚಾರ ಸುದ್ದಿಯಾಗುತ್ತಿದ್ದು, ಅದೇನೆಂದರೆ ಮಲೈಕಾ ಗರ್ಭಿಣಿ ಎಂದು. ಆದ್ರೆ ಈ ಕುರಿತು ನಟ ಅರ್ಜುನ್‌ ಕಪೂರ್‌ ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆ.

ಮಲೈಕಾ ಗರ್ಭಿಣಿ ಎನ್ನುವ ವಿಚಾರ ಈಗ ಮಾತ್ರವಲ್ಲ, ಕಳೆದ ನವೆಂಬರ್‌ನಲ್ಲೂ ಸುದ್ದಿಯಾಗಿತ್ತು. ಆಗ ಅರ್ಜುನ್‌ ಕಪೂರ್‌ ಅವರು ಸುಳ್ಳು ಸುದ್ದಿ ಹರಡಿದ ಮಾಧ್ಯಮದವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದೇ ವಿಚಾರಕ್ಕೆ ಅರ್ಜುನ್‌ ಇದೀಗ ಮತ್ತೊಮ್ಮೆ ಸಿಟ್ಟಾಗಿ ಮಾತನಾಡಿದ್ದಾರೆ.

ಎಷ್ಟು ಕೀಳು ಮಟ್ಟಕ್ಕೆ ಇಳಿದು ವರದಿ ಮಾಡಬಹುದು ಎನ್ನುವುದನ್ನು ನಾನು ಈ ವಿಚಾರದಲ್ಲಿ ನೋಡಿದ್ದೇನೆ. ಅನೈತಿಕತೆಯಿಂದ ಕಸದಂತಹ ಸುದ್ದಿಗಳನ್ನು ಮಾಡಿದ್ದೀರಿ. ಈ ರೀತಿ ನಕಲಿ ಸುದ್ದಿಗಳನ್ನು ಹಾಕುವಾಗ ನಾವು ಸತ್ಯವಾದ ವಿಚಾರಗಳನ್ನು ಹಾಕಿದರೂ ನಕಲಿ ಎಂದು ನಿರ್ಲಕ್ಷಿಸುತ್ತೇವೆ. ನಮ್ಮ ವೈಯಕ್ತಿಕ ಬದುಕಿನೊಂದಿಗೆ ಅಟವಾಡುವುದಕ್ಕೆ ಧೈರ್ಯ ಮಾಡಬೇಡಿ” ಎಂದು ಹೇಳಿದ್ದಾರೆ.

ಜನರಿಗೆ ನಕಾರಾತ್ಮಕತೆಯನ್ನು ಸುಲಭವಾಗಿ ತಲುಪಿಸಬಹುದು. ಅದು ಈಗಿನ ಟ್ರೆಂಡ್‌. ನಾವು ನಟರು. ನಮ್ಮ ಬದುಕು ಯಾವಾಗಲೂ ಖಾಸಗಿಯಾಗಿರುವುದಿಲ್ಲ. ನಾವು ಪತ್ರಕರ್ತರನ್ನು ಅವಲಂಬಿಸಿದ್ದೇವೆ. ನಮ್ಮ ಸಿನಿಮಾಗಳ ಬಗ್ಗೆ ನೀವು ಪ್ರಚಾರ ಮಾಡಿದರೇ ಅದು ಜನರಿಗೆ ತಲುಪುವುದು. ಹಾಗಾಗಿ ನೀವು ಇಂತಹ ಸೂಕ್ಷ್ಮ ವಿಚಾರಗಳನ್ನು ಬರೆಯುವಾಗ ಒಮ್ಮೆ ನಮ್ಮ ಬಳಿ ಬಂದು ಮಾತನಾಡಿ. ನಿಜವೇ ಎಂದು ತಿಳಿದುಕೊಂಡು ಹೋಗಿ. ಸುಮ್ಮನೆ ಊಹಿಸಿಕೊಂಡು ಬರೆಯಬೇಡಿ” ಎಂದು ಅರ್ಜುನ್‌ ಮಾಧ್ಯಮವದರಿಗೆ ಕೇಳಿಕೊಂಡಿದ್ದಾರೆ.

ನಾನು ಪತ್ರಕರ್ತರನ್ನು ನಂಬಿರುವುದರಿಂದ ನೀವು ಹಾಕಿದ ನಕಲಿ ಸುದ್ದಿಗಳ ಕುರಿತಾಗಿ ಪೋಸ್ಟ್‌ ಹಾಕಿದ್ದೆ. ನಾನು ಏನನ್ನೂ ಮುಚ್ಚಿಟ್ಟಿಲ್ಲ. ಯಾವುದೇ ಪತ್ರಕರ್ತ ಏನನ್ನಾದರೂ ಹಾಕುತ್ತಾನಂದರೆ ಅದನ್ನು ಪರಿಶೀಲನೆ ಮಾಡಿಕೊಳ್ಳಬೇಕು. ಅದರಲ್ಲೂ ನಮ್ಮ ವೈಯಕ್ತಿಕ ಜೀವನದ ವಿಚಾರಕ್ಕೆ ಬಂದಾಗ ಅದು ಅವಶ್ಯಕವಾಗುತ್ತದೆ. ನಾವೆಲ್ಲರೂ ಇಲ್ಲಿ ಕೆಲಸ ಮಾಡುವುದಕ್ಕೇ ಇದ್ದೇವೆ. ಹಾಗಿರುವಾಗ ಬೇರೆಯವರ ಹಣದಲ್ಲಿ ನೀವು ಮೋಜು ಮಾಡುವುದಕ್ಕೆ ಪ್ರಯತ್ನಿಸಬೇಡಿ ಎಂದು ಹೇಳಿದ್ದಾರೆ.‌

ಮಲೈಕಾ ಈ ಹಿಂದೆ ನಟ, ನಿರ್ಮಾಪಕ ಅರ್ಬಾಜ್ ಖಾನ್ ಅವರನ್ನು ವಿವಾಹವಾಗಿದ್ದರು. ಇಬ್ಬರು 2016ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದಾರೆ. ಅವರಿಗೆ ಅರ್ಹಾನ್ ಖಾನ್ ಹೆಸರಿನ ಮಗನಿದ್ದಾನೆ.

ಮಲೈಕಾ ಮತ್ತು ಅರ್ಜುನ್ ಹಲವು ವರ್ಷಗಳಿಂದ ಪ್ರೀತಿಯಲ್ಲಿದ್ದು, 2019ರಲ್ಲಿ ಅದನ್ನು ಸಾರ್ವಜನಿಕವಾಗಿ ಹೇಳಿಕೊಂಡಿದ್ದಾರೆ. ಇವರಿಬ್ಬರ ಮದುವೆ ವದಂತಿ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!