ಹೊಸದಿಗಂತ ಡಿಜಿಟಲ್ ಡೆಸ್ಕ್:
ಇದೀಗ ಬಾಲಿವುಡ್ ಇಂಡಸ್ಟ್ರಿಯ ಟಾಪ್ ಹೀರೋಯಿನ್ ಆಲಿಯಾ ಭಟ್ ಬೆಳ್ಳಂಬೆಳಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಮಾಡಿದ್ದಾರೆ. ಸದ್ಯ ಈ ಪೋಸ್ಟ್ ಎಲ್ಲೆಡೆ ವೈರಲ್ ಆಗಿದೆ.
ಆಲಿಯಾ ಭಟ್ ಮುಖದ ಒಂದು ಭಾಗಕ್ಕೆ ಪ್ಯಾರಾಲಿಸಿಸ್ ಆಗಿದೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡಿದ್ದು, ಆಲಿಯಾ ಗರಂ ಆಗಿದ್ದಾರೆ.
ಕಾಸ್ಮೆಟಿಕ್ ಸರ್ಜರಿ ಬಗ್ಗೆ ನನಗೆ ಯಾವುದೇ ಬೇಸರ ಇಲ್ಲ, ಅವರವರ ದೇಹಕ್ಕೆ ಅವರು ಯಾವ ರೀತಿಯ ಸರ್ಜರಿಯನ್ನಾದರೂ ಮಾಡಿಸಿಕೊಳ್ಳಲಿ ಚಿಂತೆ ಇಲ್ಲ, ಇದರ ಬಗ್ಗೆ ನನ್ನದು ನೋ ಕಮೆಂಟ್ಸ್.
ಆದರೆ ಈಗ ಹರಡುತ್ತಿರೋ ಸುದ್ದಿ? ವಿಚಿತ್ರವಾಗಿದೆ. ನಾನು ಬೋಟೋಕ್ಸ್ ಮಾಡಿಸಿಕೊಂಡಿದ್ದೇನೆ, ಆದರೆ ಅದು ಸರಿಯಾಗದೇ ಸೈಡ್ ಎಫೆಕ್ಟ್ ಆಗಿದೆ ಎನ್ನುವ ನೂರಾರು ಆರ್ಟಿಕಲ್ಸ್ ಹರಿದಾಡುತ್ತಿದೆ. ಅದಕ್ಕೆ ಆಲಿಯಾ ಭಟ್ ಸ್ಮೈಲ್ ವಿಚಿತ್ರವಾಗಿದೆ, ಅವರು ಮಾತನಾಡುವಾಗ ವಿಚಿತ್ರವಾದ ಮುಖದ ಆಕ್ಷನ್ ಮಾಡ್ತಾರೆ ಎಂದು ಹೇಳಲಾಗ್ತಿದೆ.
ಇದೆಲ್ಲಾ ಏನು? ಇಷ್ಟು ಕಾನ್ಫಿಡೆನ್ಸ್‌ನಲ್ಲಿ ಹೀಗೆ ಮಾತಾಡೋದು ಹೇಗೆ? ಏನೋ ಬಾಯಿಗೆ ಬಂದಿದ್ದು ಮಾತಾಡ್ತಾರೆ ಅಂದ್ರೆ ಅದಕ್ಕೆ ಸೈಂಟಿಫಿಕ್ ಎಕ್ಸ್‌ಪ್ಲೇನೇಷನ್ ಕೊಡೋಕೆ ಹೋಗ್ತಿದ್ದೀರಿ, ನನ್ನ ಮುಖಕ್ಕೆ ಮೈಕ್ರೋಸ್ಕೋಪ್ ಇಟ್ಟು ಅಬ್ಸರ್ವ್ ಮಾಡುವಂತದ್ದು ಏನಿದೆ?
ಆಲಿಯಾ ಭಟ್ ಮುಖದ ಒಂದು ಭಾಗ ಪ್ಯಾರಾಲಿಸಿಸ್‌ಗೆ ಒಳಗಾಗಿದ್ಯಾ?Are you kidding me?
ಯಾವ ಸಾಕ್ಷಿ ಇಲ್ಲದೆ, ಕನ್ಫರ್ಮೇಷನ್ ಇಲ್ಲದೆ, ಬ್ಯಾಕ್ ಅಪ್ ಇಲ್ಲದೆ ಹೀಗೆ ಬಾಯಿಗೆ ಬಂದ ಹಾಗೆ ಹೇಗೆ ಮಾತಾಡ್ತೀರಿ ಅನ್ನೋದು ಇನ್ನೂ ನನಗೆ ಅರ್ಥವಾಗಿಲ್ಲ ಎಂದು ಹೇಳಿಕೊಂಡಿದ್ದಾರೆ.