ಬೆನ್ನು ನೋವು ವಿಪರೀತ ಕಾಡುತ್ತಿದೆಯೇ? ಈ ನಿವಾರಣೋಪಾಯಗಳನ್ನು ಅನುಸರಿಸಿ ನೋಡಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಇತ್ತೀಚಿನ ದಿನಗಳಲ್ಲಿ ವಯಸ್ಸಾದವರಿಂದ ಹಿಡಿದು ಮಕ್ಕಳವರೆಗೆ ಬೆನ್ನು ನೋವಿನ ಸಮಸ್ಯೆ ಸರ್ವೇಸಾಧಾರಣವಾಗಿ ಕಾಡುತ್ತದೆ. ಜನರು ದೈಹಿಕ ಚಟುವಟಿಕೆಗಳನ್ನು ಕಡಿಮೆ ಮಾಡುತ್ತಿರುವುದು ಬೆನ್ನು ನೋವಿಗೆ ಆಹ್ವಾಯವೀಯುತ್ತಿದೆ. ಎಷ್ಟೇ ಪ್ರಯತ್ನ ಪಟ್ಟರೂ ಈ ಸಮಸ್ಯೆಯನ್ನು ದೂರ ಮಾಡುವುದು ಕಷ್ಟ.
ಕೆಲವೊಂದು ತಂತ್ರಗಳನ್ನು ಅನುಸರಿಸಿದರೆ ಬೆನ್ನುನೋವಿನಿಂದ ಪಾರಾಗಲು ಸಾಧ್ಯ. ಅಂತಹ ವಿಧಾನಗಳೇನು ಎಂಬ ವಿವರ ಇಲ್ಲಿದೆ ನೋಡಿ.
ಲ್ಯಾಪ್‌ಟಾಪ್‌ನ ಹಿಡಿದು ಹಾಸಿಗೆಯ ಮೇಲೆ ಕುಳಿತುಕೊಳ್ಳುವುದು ಕಾಲಾನಂತರದಲ್ಲಿ ಬೆನ್ನುನೋವಿಗೆ ಕಾರಣವಾಗುತ್ತದೆ. ಆದ್ದರಿಂದ ಲ್ಯಾಪ್‌ ಹಿಡಿದು ಕೂರಲು ಮೆತ್ತನೆಯ ಕುರ್ಚಿಗಳನ್ನು ಬಳಸಿ. ಕೆಲಸ ಮಾಡುವಾಗ ನಿಮಗೆ ಅಗತ್ಯವಿರುವ ಆರಾಮದಾಯಕವಾದ ಮೇಜು ಮತ್ತು ಕುರ್ಚಿಯನ್ನು ಬಳಸಿ. ಉತ್ತಮ ನಿದ್ದೆ ಅಗತ್ಯ ವಿಶ್ರಾಂತಿ ಸಹ ಬೆನ್ನು ನೋವಿಗೆ ಮುಕ್ತಿ ನೀಡಿ ದೇಹವನ್ನು ಆರಾಮದಾಯಕವಾಗಿ ಇರಿಸುತ್ತದೆ. ಮಲಗುವಾಗ ದೊಡ್ಡ ದಿಂಬು ಬಳಸುವುದನ್ನು ಕಡಿಮೆ ಮಾಡಿ, ಇದು ಕುತ್ತಿಗೆ ನೋವಿಗೆ ಕಾರಣವಾಗಬಹುದು.
ಬೆನ್ನು ನೋವು ಒತ್ತಡ, ಉದ್ವೇಗ ಮತ್ತು ಇತರ ದೈಹಿಕವಲ್ಲದ ಕಾರಣಗಳಿಂದಲೂ ಬರಬಹುದು ಎಂದು ವೈದ್ಯರು ಹೇಳುತ್ತಾರೆ. ಆದ್ದರಿಂದ ಆಗಾಗ್ಯೆ ದೇಹಕ್ಕೆ ವಿಶ್ರಾಂತಿ ನೀಡಿ ಅಗತ್ಯ ವ್ಯಾಯಮಗಳಲ್ಲಿ ತೊಡಗುವುದರಿಂದಲೂ ಬೆನ್ನುನೋವನ್ನು ಉತ್ತಮವಾಗಿ ನಿರ್ವಹಿಸಬಹುದು.
ನಿಮ್ಮ ಬೆನ್ನು ನೋವು 4 ವಾರಗಳ ನಂತರವೂ ಮಾಯವಾಗದಿದ್ದರೆ ಅಥವಾ 12 ವಾರಗಳಿಗೂ ಮೀರಿದ ದೀರ್ಘಾವಧಿಯ ನೋವನ್ನು ಹೊಂದಿದ್ದರೆ ಮತ್ತು ನಿಮ್ಮ ದೈನಂದಿನ ಚಟುವಟಿಕೆಗಳನ್ನು ಮುಂದುವರಿಸದಂತೆ ನಿಮ್ಮನ್ನು ತಡೆಯುತ್ತದೆ. ಆದ್ದರಿಂದ ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ. ಅವರು ನಿಮ್ಮ ನೋವಿನ ಕಾರಣವನ್ನು ಗುರುತಿಸಲು ಸಹಾಯ ಮಾಡಬಹುದು ಮತ್ತು ಹೊಸ ಚಿಕಿತ್ಸೆಯನ್ನು ಸೂಚಿಸಬಹುದು. ನಿಮ್ಮ ಕಾಲುಗಳು ಜುಮ್ಮೆನ್ನುವುದು, ಮರಗಟ್ಟುವಿಕೆ ಅಥವಾ ದೌರ್ಬಲ್ಯವನ್ನು ಅನುಭವಿಸಿದರೆ ತಕ್ಷಣವೇ ವೈದ್ಯಕೀಯ ಚಿಕಿತ್ಸೆ ಪಡೆಯಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!