ಖತಂ ಆಗ್ತಿದೆಯಾ ಬಾಲಿವುಡ್ ಮೋಹ, ಖಾನ್ ಗಿರಿ? ಲಾಲ್ ಸಿಂಗ್ ಚಡ್ಡಾ ಕಳಪೆ ಶುರುವಾತು ಹುಟ್ಟಿಸಿರೋ ಪ್ರಶ್ನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಒಂದು ಕಾಲದಲ್ಲಿ ಖಾನ್‌ ಗಳೆಂದರೆ ಬಾಲಿವುಡ್ ಅನ್ನು ಆಳುವ ಸಾಮ್ರಾಟರು ಎಂಬಂತೆ ಟ್ರೇಡ್‌ ಮಾರ್ಕ್‌ ಆಗಿಬಿಟ್ಟಿದ್ದ ಕಾಲವೀಗ ಸಂಪೂರ್ಣ ಬದಲಾಗ್ತಿದೆ. ಮೊನ್ನೆಯಷ್ಟೇ ತೆರೆಗೆ ಬಂದಿರುವ ಅಮೀರ್‌ ಖಾನ್‌ ಅಭಿನಯದ ಲಾಲ್‌ ಸಿಂಗ್‌ ಚಡ್ಡಾ ಚಿತ್ರದ ತೀರಾ ಕಳಪೆ ಆರಂಭವು ಈ ಮಾತಿಗೆ ಇನ್ನಷ್ಟು ಪುಷ್ಟಿ ನೀಡುವಂತಿದೆ. ಬಿಡುಗಡೆಯಾಗಿ ಎರಡು ದಿನವಾದರೂ ಖಾನ್‌ ಅಭಿನಯದ ಚಿತ್ರ ವೀಕ್ಷಿಸಲು ಪ್ರೇಕ್ಷಕ ಮನಸ್ಸು ಮಾಡದೇ ಇರುವುದು ಕುಸಿಯುತ್ತಿರುವ ಖಾನ್‌ ಸ್ಟಾರ್‌ಡಂ ಅನ್ನು ಸೂಚಿಸುವಂತಿದೆ.

ಕಳೆದ ನಾಲ್ಕು ವರ್ಷಗಳ ಕಾಲ ಬಾಲಿವುಡ್‌ ನಿಂದ ದೂರವುಳಿದಿದ್ದ ಅಮೀರ್‌ ಖಾನ್‌ ʼಲಾಲ್‌ ಸಿಂಗ್‌ ಚಡ್ಡಾʼ ಚಿತ್ರದ ಮೂಲಕ ಕಂ ಬ್ಯಾಕ್‌ ಮಾಡುವ ನಿರೀಕ್ಷೆಯಿಟ್ಟುಕೊಂಡಿದ್ದರು. ಆದರೆ ಅವರು ಚಿತ್ರವು ದೇಶದಾದ್ಯಂತ ಕಳಪೆ ಪ್ರದರ್ಶನ ಕಾಣುತ್ತಿದ್ದು ಆರಂಭಿಕ ಆದಾಯವು ಕೇವಲ 11 ರಿಂದ 12.50ಕೋಟಿಯಷ್ಟನ್ನೇ ಗಳಿಸಿದೆ, ಇದು ಅಮೀರ್‌ ಖಾನ್‌ ಅವರಿಗೆ ಮುಖಭಂಗದಂತಿದ್ದು ಅವರ 13 ವರ್ಷದ ಫಿಲ್ಮ್‌ ಕೆರಿಯರ್‌ ನಲ್ಲಿ ಇಷ್ಟು ಕಳಪೆ ಪ್ರದರ್ಶನ ಕಂಡ ಚಿತ್ರ ಇದೇ ಆಗಿದೆ.

ಇತ್ತೀಚಿನ ಚಿತ್ರಗಳಲ್ಲಿ 83, ಬಚ್ಚನ್‌ ಪಾಂಡೆಗಳು ಕಳಪೆ ಪ್ರದರ್ಶನ ಮಾಡಿದ್ದವು. ಆದರೆ ಲಾಲ್‌ ಸಿಂಗ್‌ ಚಡ್ಡಾ ಇದಕ್ಕಿಂತಲೂ ಕಳಪೆ ಪ್ರದರ್ಶನ ತೋರಿದೆ. ದೇಶದ ಎಲ್ಲಾ ಭಾಗಗಳಲ್ಲೂ ಪ್ರೇಕ್ಷಕರು ಚಿತ್ರವನ್ನು ದೂರವಿಟ್ಟಿದ್ದಾರೆ. ಸೌತ್‌ ಸಿನೆಮಾಗಳ ಅಬ್ಬರದಿಂದ ಈಗಾಗಲೇ ಆಘಾತ ಕಂಡಿರುವ ಬಾಲಿವುಡ್‌ ಚಿತ್ರರಂಗಕ್ಕೆ ಲಾಲ್‌ ಸಿಂಗ್‌ ಚಡ್ಡಾದ ಈ ಸೋಲು ʼಒಳ್ಳೆಯ ಚಿತ್ರಗಳನ್ನು ಮಾಡಿʼ ಎಂಬ ಸಂದೇಶವನ್ನು ಸ್ಪಷ್ಟವಾಗಿ ರವಾನಿಸಿದೆ.

ಅಮೀರ್ ಖಾನ್‌ ಹಾಗೂ ಕರೀನಾ ಕಪೂರ್‌ ಅವರ ಹಿಂದಿನ ಅಸಂಬದ್ಧ ಹೇಳಿಕೆಗಳಿಂದ ಪ್ರಾರಂಭದಿಂದಲೂ ಹೆಚ್ಚು ಟೀಕೆಗೆ ಗುರಿಯಾಗಿದ್ದ ಲಾಲ್‌ ಸಿಂಗ್‌ ಚಡ್ಡಾಗೆ ಇನ್ನೊಂದು ವಾರದಲ್ಲಿ ರಜಾದಿನಗಳು ಇರುವುದರಿಂದ ಮುಖವುಳಿಸಿಕೊಳ್ಳುವಷ್ಟು ಸಂಪಾದನೆ ಮಾಡಲು ಇನ್ನೂ ಕೆಲ ಸಮಯವಿದೆಯದರೂ ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಸಂಖ್ಯೆಗಳನ್ನು ಮಾಡುವ ಕನಸುಗಳು ಭಗ್ನವಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!