ಉಕ್ರೇನ್ ಅಣು ಸ್ಥಾವರದ ಬಳಿ ಶೆಲ್ಲಿಂಗ್- ಜಗತ್ತಿನ ಆತಂಕ

ಹೊಸ ದಿಗಂತ ಡಿಜಿಟಲ್ ಡೆಸ್ಕ್
ಉಕ್ರೇನ್ ಆಗ್ನೇಯ ಭಾಗದಲ್ಲಿರು ಝಪ್ರೇಜಿಯಾ ಅಣು ವಿದ್ಯುತ್ ಸ್ಥಾವರದ ಬಳಿ ಗುರುವಾರ ನಡೆದ ಶೆಲ್ಲಿಂಗ್ ದಾಳಿ ಜಗತ್ತನ್ನು ಆತಂಕಕ್ಕೆ ದೂಡಿದೆ. ಯುರೋಪಿನ ಅತಿದೊಡ್ಡ ಅಣು ಸ್ಥಾವರ ಎಂದು ಹೆಸರಾಗಿರುವ ಝಪ್ರೇಜಿಯಾ ಸ್ಥಾವರದ ಬಳಿ ತಕ್ಷಣದಿಂದಲೇ ಎಲ್ಲ ಸಂಘರ್ಷಗಳನ್ನು ನಿಲ್ಲಿಸುವಂತೆ ವಿಶ್ವಸಂಸ್ಥೆ ತಾಕೀತು ಮಾಡಿದೆ.

ಅಣು ಸ್ಥಾವರದ ಬಳಿ ಶೆಲ್ಲಿಂಗ್ ಆಗಿರುವುದು ಯಾರಿಂದ ಎಂಬ ಬಗ್ಗೆ ಉಕ್ರೇನ್ ಮತ್ತು ರಷ್ಯದ ಅಧಿಕಾರಿಗಳು ಪರಸ್ಪರರ ದೋಷಾರೋಪಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಅಣುಸ್ಥಾವರದಲ್ಲಿ ವಿಕಿರಣ ತ್ಯಾಜ್ಯಗಳ ಸಂಗ್ರಹ ಇರುವುದರಿಂದ ಶೆಲ್ ದಾಳಿಯು ಅವುಗಳ ಸೋರಿಕೆಗೆ ಕಾರಣವಾದರೆ ಅದು ಆ ಪ್ರದೇಶದಲ್ಲಿ ಮಾತ್ರವಲ್ಲದೇ ಇತರೆಡೆಯೂ ಸಮಸ್ಯೆ ಸೃಷ್ಟಿಗೆ ಕಾರಣವಾಗಬಲ್ಲದು ಎಂಬ ಆತಂಕ ವಿಶ್ವಸಂಸ್ಥೆಯದ್ದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!