Thursday, March 30, 2023

Latest Posts

ಮಾಹಿತಿ ಸಂಗ್ರಹಕ್ಕೆ ಚೀನಾ ಭಾರತದ ಸಿಸಿಟಿವಿ ಫೂಟೇಜ್ ಬಳಕೆ ಮಾಡ್ತಿದ್ಯಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚೀನಾದ ಹ್ಯಾಕರ್‌ಗಳು ಭಾರತದಲ್ಲಿ ಅಳವಡಿಸಿರುವ ತನ್ನ ಸಿಸಿಟಿವಿಗಳಿಂದಲೇ ಭಾರತದ ಬಗ್ಗೆ ಮಾಹಿತಿ ಪಡೆಯುವ ಅಪಾಯ ಎದುರಾಗಿದೆ.

ಕಚೇರಿಗಳಲ್ಲಿ ಅಳವಡಿಕೆಯಾಗಿರುವ ಸಿಸಿಟಿವಿ ಫೂಟೇಜ್‌ಗಳನ್ನು ಬಳಸಿ ಮಾಹಿತಿ ಸಂಗ್ರಹಿಸುವ ಸಾಧ್ಯತೆ ಇದೆ, ಹಾಗಾಗಿ ಸರ್ಕಾರಿ ಕಚೇರಿಗಳ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ನಿಷೇಧಿಸಿ ನಿರ್ದೇಶನ ನೀಡಿ ಎಂದು ಪ್ರಧಾನಿ ಮೋದಿಗೆ ಅರುಣಾಚಲ ಪ್ರದೇಶದ ಕಾಂಗ್ರೆಸ್ ಶಾಸಕರೊಬ್ಬರು ಪತ್ರ ಬರೆದಿದ್ದಾರೆ.

ದೆಹಲಿಯ ಫಾಸಿಘಾಟ್ ಪಶ್ಚಿಮದ ಶಾಸಕ ಮತ್ತು ಮಾಜಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ನಿನೊಂಗ್ ಎರಿಂಗ್ ಈ ಬಗ್ಗೆ ಮಾತನಾಡಿದ್ದಾರೆ.

ಚೀನಾ ನಿರ್ಮಿತ ಸಿಸಿಟಿವಿಗಳ ಭರವಸೆ ಕಷ್ಟಸಾಧ್ಯ, ಸಿಸಿಟಿವಿಗಳನ್ನು ತನ್ನ ಕಣ್ಣು ಮತ್ತು ಕಿವಿಗಳನ್ನಾಗಿ ಚೀನಾ ಬಳಸುತ್ತಿರಬಹುದು ಎಂದು ಪತ್ರದಲ್ಲಿ ಬರೆದಿದ್ದಾರೆ.

ಇಂಟರ್ನೆಟ್ ಪ್ರೊಟೊಕಾಲ್ ಹಾಗೂ ಇಂಟರ್ನೆಟ್ ಚಾಲಿತ ಡಿಜಿಟಲ್ ವಿಡಿಯೋ ರೆಕಾರ್ಡಿಂಗ್ ಸಾಧನಗಳನ್ನು ಬಳಸಿ ಚೀನಾ ಮಾಹಿತಿ ಸಂಗ್ರಹ ಮಾಡುವ ಸಾಧ್ಯತೆ ಇದೆ. ಹಾಗಾಗಿ ಅವುಗಳ ಬಳಕೆ ನಿಲ್ಲಿಸಿ ಎಂದು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!