ದಿನೇಶ್ ಗೋಹತ್ಯೆಗೆ ಬೆಂಬಲ ನೀಡುತ್ತಿದ್ದಾರೋ? ಗೋಮಾಂಸ ತಿನ್ನೋದನ್ನ ಸಮರ್ಥನೆ ಮಾಡ್ತಿದ್ದಾರೋ?: ಸಿಟಿ ರವಿ ವಾಗ್ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಚಿವ ದಿನೇಶ್ ಗುಂಡೂರಾವ್ ಅವರ ವಿರುದ್ಧ ಬಿಜೆಪಿ ನಾಯಕ ಸಿಟಿ ರವಿ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ (BJP) ಕಚೇರಿಯಲ್ಲಿ ಮಾತನಾಡಿದ ಅವರು, ದಿನೇಶ್ ಗುಂಡೂರಾವ್ ಅವರು ಗೋಹತ್ಯೆಗೆ ಬೆಂಬಲ ನೀಡುತ್ತಿದ್ದಾರೋ? ಗೋಮಾಂಸ ತಿನ್ನೋದನ್ನ ಸಮರ್ಥನೆ ಮಾಡ್ತಿದ್ದಾರೋ? ಅವರು ಯಾವುದನ್ನು ಉತ್ತೇಜನ ಮಾಡುವುದಕ್ಕೆ ಹೊರಟಿದ್ದಾರೆ. ಏನಾದ್ರು ಹೊಸ ದಂಧೆ ಶುರು ಮಾಡುವುದಕ್ಕೆ ಹೊರಟಿದ್ದಾರಾ? ದಂಧೆ ಶುರು ಮಾಡುವುದಕ್ಕೆ ಸಹಕಾರ ಸಿಗಲಿ ಎಂದು ಮಾತಾಡ್ತಿದ್ದಾರಾ? ಎಂದು ಕಿಡಿಕಾರಿದ್ದಾರೆ.

ಸಾವರ್ಕರ್ ದನದ ಮಾಂಸ ತಿನ್ನುತ್ತಿದ್ದರು ಎಂಬ ದಿನೇಶ್ ಗುಂಡೂರಾವ್ ಹೇಳಿಕೆ ವಿರುದ್ಧ ಕಿಡಿಕಾರಿದ್ದಾರೆ.

ನಾನು ಅವರ ಹೇಳಿಕೆ ಗಮನಿಸಿದ್ದೇನೆ. ಮೂಲಭೂತ ವಾದ, ರಾಷ್ಟ್ರವಾದದ ನಡುವೆ ಅಗಾಧವಾದ ಅಂತರ ಇದೆ. ಮೂಲಭೂತ ವಾದ ದೇಶ ಒಡೆಯಿತು. ಅಖಂಡ ಭಾರತದ ವಿಭಜನೆಗೆ ಕಾರಣವಾಯ್ತು. ಪಾಕಿಸ್ತಾನ ರಚನೆಗೆ ಕಾರಣವಾಯ್ತು. ಲಕ್ಷಾಂತರ ಜನರ ಮಾರಣ ಹೋಮಕ್ಕೆ ಕಾರಣವಾಯ್ತು. ರಾಷ್ಟ್ರವಾದ ದೇಶಭಕ್ತಿಯಿಂದ ಕೂಡಿರೋದು. ರಾಷ್ಟ್ರವಾದದಿಂದ ದೇಶ ಉಳಿಸಬಹುದು. ಮೂಲಭೂತ ವಾದದಿಂದ ಪಾಕಿಸ್ತಾನ ನಿರ್ಮಾಣ ಆಗುತ್ತದೆ. ದಿನೇಶ್ ಗುಂಡೂರಾವ್ ಮತ್ತು ಪಾರ್ಟಿ ಮೂಲಭೂತ ವಾದವನ್ನು ಸಮರ್ಥನೆ ಮಾಡ್ತಿದೆಯೋ? ಅಥವಾ ರಾಷ್ಟ್ರೀಯ ವಾದವನ್ನೋ? ಮತ್ತಷ್ಟು ಪಾಕಿಸ್ತಾನ ನಿರ್ಮಾಣ ಮಾಡೋದು ನಿಮ್ಮ ಉದ್ದೇಶನಾ? ಎಂದು ವಾಗ್ದಾಳಿ ನಡೆಸಿದರು.

ಗಾಂಧೀಜಿ ಗೋಹತ್ಯೆ ಪರ ಇದ್ರಾ? ವಿರೋಧ ಇದ್ರಾ? ಗಾಂಧಿ ಒಂದು ದಿನ ಅಧಿಕಾರ ಸಿಕ್ಕರೆ ಸಂಪೂರ್ಣ ಗೋಹತ್ಯೆ ನಿಷೇಧ ಮಾಡ್ತೀನಿ ಎಂದು ಹೇಳಿದ್ರು. ಹಾಗಾದರೆ ದಿನೇಶ್ ಗುಂಡೂರಾವ್ ಮತ್ತು ಪಾರ್ಟಿ ಗಾಂಧಿ ವಿಚಾರಧಾರೆ ಪರವೋ? ವಿರುದ್ದವೋ? ಗಾಂಧಿ ವಿಚಾರಧಾರೆ ಪರ ಇದ್ದರೆ ಗೋಹತ್ಯೆ ಮತ್ತು ಗೋಮಾಂಸ ಭಕ್ಷಣೆ ಎರಡನ್ನೂ ಸಮರ್ಥನೆ ಮಾಡುವುದಿಲ್ಲ. ಜಿನ್ನಾ ವಿಚಾರಧಾರೆ ಪರ ಇದ್ದರೆ ಗೋಹತ್ಯೆ ಮತ್ತು ಗೋಮಾಂಸ ಭಕ್ಷಣೆ ಭಾರತದ ವಿಭಜನೆಯನ್ನು ಸಮರ್ಥನೆ ಮಾಡುತ್ತಾರೆ. ದಿನೇಶ್ ಗುಂಡೂರಾವ್ ಜಿನ್ನಾ ವಿಚಾರಧಾರೆ ಪರವೋ? ಗಾಂಧಿ ವಿಚಾರಧಾರೆ ಪರವೋ? ಸ್ಪಷ್ಟಪಡಿಸಬೇಕು ಎಂದು ಪ್ರಶ್ನೆ ಮಾಡಿದರು.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

1 COMMENT

LEAVE A REPLY

Please enter your comment!
Please enter your name here

error: Content is protected !!