CINE | ಎರಡು-ಮೂರು ಬಾರಿ ನೋಡುವಷ್ಟು ಚನ್ನಾಗಿದ್ಯಾ ಹೀರಾಮಂಡಿ??

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಯಾವುದೇ ಸೀರಿಸ್ ಹಿಟ್ ಆದರೂ ಅದರ ಬಗ್ಗೆ ಒಂದಷ್ಟು ವಾರಗಳ ಕಾಲ ಚರ್ಚೆ ಇರುತ್ತದೆ. ಆದರೆ, ‘ಹೀರಾಮಂಡಿ’ ಸೀರಿಸ್​ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿಲ್ಲ. ಈ ಸೀರೀಸ್‌ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರಿಗೆ ಹೀರಾಮಂಡಿ ಇಷ್ಟವಾದರೆ ಇನ್ನು ಹಲವರಿಗೆ ಸ್ವಲ್ಪವೂ ಇಷ್ಟವಾಗಿಲ್ಲ.

Heeramandi: The Diamond Bazaar' series review: Sanjay Leela Bhansali's  dazzling soap opera - The Hinduಜನರ ಪ್ರತಿಕ್ರಿಯೆ ನೋಡಿ ಖುಷಿಯಾಗಿದೆ. ಒಂದೇ ಸ್ಟ್ರೆಚ್​ನಲ್ಲಿ ಈ ಸೀರಿಸ್​ನ ಎರಡು ಬಾರಿ, ಮೂರು ಬಾರಿ ನೋಡಿದವರು ಇದ್ದಾರೆ. ಈ ರೀತಿ ಪ್ರತಿಕ್ರಿಯೆ ಸಿಕ್ಕಿದ್ದು ಖುಷಿ ನೀಡಿದೆ. ಸಿನಿಮಾ ನೋಡಿ ನಾನಾ ರೀತಿಯ ಕಂಟೆಂಟ್​ಗಳನ್ನು ವಿಶ್ವಾದ್ಯಂತ ಸಿದ್ಧಪಡಿಸಲಾಗುತ್ತಿದೆ ಎಂದು ನಿರ್ದೇಶಕ ಸಂಜಯ್‌ ಲೀಲಾ ಬನ್ಸಾಲಿ ಹೇಳಿದ್ದಾರೆ.

Heeramandi Director Sanjay Leela Bhansali On Receiving Love From Pakistan:  They Were Anxiously Waiting | Times Nowಈ ಸರಣಿಯ ಮ್ಯೂಸಿಕ್ ಜನರಿಗೆ ಇಷ್ಟ ಆಗಿದೆ. ಒಟಿಟಿಯಲ್ಲಿ ಈ ರೀತಿಯ ಶೋಗಳು ಅಪರೂಪ. ಈ ಭಾವನಾತ್ಮಕ ಪಯಣಕ್ಕೆ ಅನೇಕರು ಕನೆಕ್ಟ್ ಆಗಿದ್ದಾರೆ ಎಂದು ಬನ್ಸಾಲಿ ಹೇಳಿದ್ದಾರೆ. ನಿಜಕ್ಕೂ ಪ್ರೇಕ್ಷಕರು ಈ ಸೀರಿಸ್​ನ ಎರಡು-ಮೂರು ಬಾರಿ ನೋಡಿದ್ದಾರಾ ಎನ್ನುವ ಪ್ರಶ್ನೆಯನ್ನು ಅನೇಕರು ಕೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!