ಮೇಘನಾ ಶೆಟ್ಟಿ, ಶಿವಮೊಗ್ಗ
ಈಗೆಲ್ಲಾ ಬಸ್‌ನಲ್ಲಿ ಬೇಕಾದ್ರೆ ಈಸಿಯಾಗಿ ಓಡಾಡ್ಬೋದು ಬಟ್ ಆಟೋದಲ್ಲಿ ಓಡಾಡೋದು ಕಷ್ಟದ ಕೆಲಸ. ಇನ್ನು ಏನಾದ್ರೂ ಎಮರ್ಜೆನ್ಸಿ ಸಂದರ್ಭ ಬಂದಾಗ ಆಂಬುಲೆನ್ಸ್ ನಿಧಾನ ಎನಿಸಿದರೆ ಆಟೋದಲ್ಲಿ ಹೋಗೋಣ ಅನ್ನೋ ಆಪ್ಷನ್ ಇಟ್ಟುಕೊಳ್ಳೋದು ಕೂಡ ಕಷ್ಟ. ಆದರೆ ಇಲ್ಲೊಬ್ರು ಆಟೋ ಡ್ರೈವರ್ ಇದ್ದಾರೆ. ಯಾರಿಗಾದ್ರೂ ಆರೋಗ್ಯ ಸಮಸ್ಯೆ ಎಂದರೆ, ಆಕ್ಸಿಡೆಂಟ್ ಆದವರಿಗೆ ಆಂಬುಲೆನ್ಸ್ ಸಿಗದಿದ್ದರೆ ಈ ಆಟೋ ಡ್ರೈವರ್ ಮುಂದೆ ಬರ್ತಾರೆ. ಕಷ್ಟ ಅಂದಾಗ ಹತ್ತಿರದವರೇ ದೂರ ಆಗ್ತಾರೆ, ಆದರೆ ಈ ವ್ಯಕ್ತಿ ಕಷ್ಟ ಅಂದ್ರೆ ಮಾತ್ರ ಸಹಾಯಕ್ಕೆ ಓಡಿ ಬರ್ತಾರೆ. ಇವರು ಪ್ರೌಡ್ ಆಟೋ ಡ್ರೈವರ್. ಇವರಿಗೆ 76 ವರ್ಷ.
ದೆಹಲಿಯ ಹರ್ಜಿಂದರ್ ಸಿಂಗ್ ತಮ್ಮ ಆಟೋ ಹಿಂದೆ ಅಪಘಾತದಲ್ಲಿ ಗಾಯಗೊಂಡವರಿಗೆ ಫ್ರೀ ಆಂಬುಲೆನ್ಸ್ ಎಂದು ಬರೆದುಕೊಂಡಿದ್ದಾರೆ. ಸ್ವಲ್ಪ ಕತ್ತಲಾಗ್ತಿದ್ದಂತೆಯೇ ಡಬಲ್ ಚಾರ್ಜ್ ಮಾಡೋ ದೆಹಲಿಯಲ್ಲಿ ಈ ವ್ಯಕ್ತಿ ಮಾತ್ರ ಕಷ್ಟದಲ್ಲಿರುವವರ ಹುಡುಕಾಟದಲ್ಲಿ ಇದ್ದಾರೆ.
ಈಗಾಗಲೇ ಸಿಂಗ್ ಅವರು ನೂರಕ್ಕೂ ಹೆಚ್ಚು ಮಂದಿಗೆ ಸಹಾಯ ಮಾಡಿದ್ದಾರೆ. ಆಟೋ ಹಿಂದೆ ತಮ್ಮ ಫೋನ್ ನಂಬರ್ ಕೆಂಪು ಅಕ್ಷರದಲ್ಲಿ ಬರೆದುಕೊಂಡಿದ್ದಾರೆ. ಕೆಲಸ ಮಾಡುವ ಅವಧಿಯಲ್ಲಿ ಯಾರ ಕರೆ ಬಂದರೂ ಉತ್ತರಿಸಿ ಸಹಾಯ ಮಾಡುತ್ತಾರೆ. ಮಾನವೀಯತೆ ಇನ್ನೂ ಉಳಿದಿದೆ ಅಂದ್ರೆ ನಂಬಬಹುದಲ್ವಾ?
ಈಗಲ್ಲ, ನನ್ನ ಕಡೆಯ ಉಸಿರು ಇರುವವರೆಗೂ ಫ್ರೀ ಆಟೋ ಆಂಬುಲೆನ್ಸ್ ಓಡಿಸ್ತೇನೆ, ಅಪಘಾತದಲ್ಲಿ ನೊಂದವರಿಗೆ ಸಹಾಯ ಮಾಡ್ತೇನೆ, ನನ್ನ ಕಣ್ಣಾರೆ ನೂರಾರು ಸಣ್ಣಪುಟ್ಟ ಅಪಘಾತಗಳನ್ನು ನೋಡಿದ್ದೇನೆ. ಅವರ ಕಷ್ಟ ಕಂಡಿದ್ದೇನೆ. ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಸೇರುವುದು ಕೂಡ ಬಹಳ ಮುಖ್ಯ. ಹೀಗಾಗಿ ನನ್ನ ಕೆಲಸ ಜಾರಿಯಲ್ಲೇ ಇದೆ ಎಂದು ಹೇಳ್ತಾರೆ ಸಿಂಗ್.
ಕೆಲವೊಮ್ಮೆ ಗಾಡಿಗೆ ಪೆಟ್ರೋಲ್‌ಗಾಗಿ ಬೇರೆ ಟ್ರಿಪ್‌ಗಳನ್ನು ಮಾಡ್ತಾರೆ, ಎಮರ್ಜೆನ್ಸಿ ಬಂದಾಗ ಮಾತ್ರ ಸಿಂಗ್ ಅವರಿಗೆ ಮೊದಲ ಪ್ರಾಮುಖ್ಯತೆ ಕೊಡುತ್ತಾರೆ.
ಮೊದಲ ಬಾರಿ ಕಣ್ಣಾರೆ ಒಂದು ಆಕ್ಸಿಡೆಂಟ್ ನೋಡಿದೆ, ನೋವಿನಲ್ಲಿದ್ದ ಅವರನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲಿಸಿದೆ. ಅವರು ದಾಖಲಾಗಿ ಜೀವಕ್ಕೆ ಅಪಾಯ ಇಲ್ಲ ಎಂದು ಗೊತ್ತಾದ ತಕ್ಷಣ ಆಟೋ ಹತ್ತಿ ಹೊರಟೆ. ಅವರ ಕಡೆಯಿಂದ ಅವರ ಕುಟುಂಬದ ಕಡೆಯಿಂದ ಯಾವ ನಿರೀಕ್ಷೆಯೂ ಇಲ್ಲ. ದಿನಕ್ಕೆ ಒಬ್ಬರಿಗಾದ್ರೂ ಸಹಾಯ ಮಾಡಿದ ಎನ್ನುವ ಖುಷಿ ನನಗೆ ಇದೆ ಎಂದು ಸಿಂಗ್ ಹೇಳುತ್ತಾರೆ.
ವಯಸ್ಸು 76 ಅಂದ್ರೆ ಸುಮ್ನೆನಾ? ಈ ವಯಸ್ಸಿನಲ್ಲಿ ಬೆನ್ನು ನೋವು, ಮಂಡಿ ನೋವು ಇನ್ನೇನೇನೋ ಸಮಸ್ಯೆಗಳು ಕಾಡೋದು ಮಾಮೂಲು. ದೇವರ ದಯೆಯಿಂದ ಆರೋಗ್ಯವಾಗಿರುವ ಸಿಂಗ್ ಅವರು ಇನ್ನೂ ಸಾಕಷ್ಟು ಕಾಲ ಇದೇ ರೀತಿ ಉತ್ತಮ ಆರೋಗ್ಯ ಸ್ಥಿತಿಯಲ್ಲಿ ಇನ್ನಷ್ಟು ಜೀವಗಳ ಉಳಿವಿಗೆ ನೆರವಾಗಲಿ ಎಂದು ಪ್ರಾರ್ಥಿಸೋಣ..