October 9, 2026
Friday, October 9, 2026
spot_img

‘ವಿದೇಶದಲ್ಲಿ ಹೂಡಿಕೆ ಮಾಡೋದು ಅಪರಾಧನಾ?’: EDಗೆ ಪ್ರಿಯಾಂಕ್ ಖರ್ಗೆ ಸವಾಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಅವರ ಕುಟುಂಬ ಸದಸ್ಯರು ಹಾಗೂ ಆಪ್ತರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ (ED) ನಡೆಸಿದ ಶೋಧ ಕಾರ್ಯಾಚರಣೆ ಕುರಿತು ಗೃಹ, ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.

ವಿದೇಶದಲ್ಲಿ ಹೂಡಿಕೆ ಮಾಡುವುದು ಅಪರಾಧವೇ ಎಂದು ಪ್ರಶ್ನಿಸಿರುವ ಅವರು, ಜಾರಕಿಹೊಳಿ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದ ಹಣದ ಜಾಡನ್ನು ED ಸಾಬೀತುಪಡಿಸಬೇಕು ಎಂದು ಸವಾಲು ಹಾಕಿದ್ದಾರೆ.

ವಿದೇಶದಲ್ಲಿ ಹೂಡಿಕೆ ಮಾಡುವುದು ಅಪರಾಧವೇ?

ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, ಹೂಡಿಕೆ ಯಾವ ದೇಶದಲ್ಲಿ ನಡೆದಿದೆ ಎಂಬುದರಿಂದ ಮಾತ್ರ ಅದು ಕಾನೂನುಬಾಹಿರವಾಗುವುದಿಲ್ಲ ಎಂದರು. ಕಾಂಗೋ ಆಗಿರಲಿ ಅಥವಾ ಕೆನಡಾ ಆಗಿರಲಿ, ವಿದೇಶದಲ್ಲಿ ಹೂಡಿಕೆ ಮಾಡುವುದು ಅಪರಾಧವೇ? ಎಂದು ಪ್ರಶ್ನಿಸಿದರು. ಜಾರಕಿಹೊಳಿ ಕಾಂಗೋದಲ್ಲಿನ ಚಿನ್ನದ ಗಣಿಗಾರಿಕೆ ಕಂಪನಿಯಲ್ಲಿ ಸುಮಾರು ಶೇ.40ರಷ್ಟು ಪಾಲು ಹೊಂದಿದ್ದಾರೆ ಎಂಬ ED ಆರೋಪದ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ:

ಹೇಳಿಕೆಗಳಿಂದ ಯಾರು ತಪ್ಪಿತಸ್ಥರಾಗಲ್ಲ

ಕರ್ನಾಟಕದ ಲೋಕೋಪಯೋಗಿ ಇಲಾಖೆ ಗುತ್ತಿಗೆಗಳಿಂದ ಲಂಚದ ರೂಪದಲ್ಲಿ ಹಣ ಪಡೆದು ಅದನ್ನು ವಿದೇಶದಲ್ಲಿ ಹೂಡಿಕೆ ಮಾಡಲಾಗಿದೆ ಎಂಬ ಆರೋಪವನ್ನು ED ಮಾಡಿದ್ದರೆ, ಯಾವ ಗುತ್ತಿಗೆಯಲ್ಲಿ ಲಂಚ ಪಡೆಯಲಾಗಿದೆ ಮತ್ತು ಆ ಹಣ ಎಲ್ಲಿಗೆ ವರ್ಗಾವಣೆಯಾಗಿದೆ ಎಂಬುದನ್ನು ತನಿಖಾ ಸಂಸ್ಥೆ ಸ್ಪಷ್ಟಪಡಿಸಬೇಕು ಎಂದರು.

ತನಿಖೆ ಪೂರ್ಣಗೊಳ್ಳುವ ಮುನ್ನ ED ಬಿಡುಗಡೆ ಮಾಡುವ ಪತ್ರಿಕಾ ಹೇಳಿಕೆಗಳಿಂದ ಮಾತ್ರ ಯಾರನ್ನೂ ತಪ್ಪಿತಸ್ಥರೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದರು.

Must Read