February 9, 2026
Monday, February 9, 2026
spot_img

Fitness | whey protein ಹಾಲಿನ ಜೊತೆ ಕುಡಿಯೋದು ಬೆಸ್ಟ್? ನೀರಿನ ಜೊತೆ ಕುಡಿಯೋದು ಒಳ್ಳೆದಾ?

ಜಿಮ್ ಪ್ರಾರಂಭಿಸಿದವರು, ತೂಕ ಕಡಿಮೆ/ಮಸಲ್ ಹೆಚ್ಚಿಸೋದು ಗುರಿಯಾಗಿರುವವರು ಸಾಮಾನ್ಯವಾಗಿ ಕೇಳೋ ಪ್ರಶ್ನೆ ಇದು Whey protein ಅನ್ನು ಹಾಲಿನ ಜೊತೆ ಕುಡಿಯೋದು ಒಳ್ಳೆಯದಾ ಅಥವಾ ನೀರಿನ ಜೊತೆನಾ? ಎರಡಕ್ಕೂ ತಮ್ಮದೇ ಆದ ಲಾಭಗಳಿವೆ. ನಿಮ್ಮ ಗುರಿ ಏನು ಅನ್ನೋದರ ಮೇಲೆ ಆಯ್ಕೆ ಮಾಡಬಹುದು.

Muscle Gain ಗುರಿ ಇದ್ದರೆ – ಹಾಲಿನ ಜೊತೆ ಬೆಸ್ಟ್
ಹಾಲಿನಲ್ಲಿ ಹೆಚ್ಚುವರಿ ಕ್ಯಾಲೊರಿ, ಪ್ರೋಟೀನ್ ಮತ್ತು ಫ್ಯಾಟ್ ಇರುತ್ತದೆ. ಇದರಿಂದ ಮಸಲ್ ನಿರ್ಮಾಣಕ್ಕೆ ಹೆಚ್ಚು ಸಹಾಯವಾಗುತ್ತದೆ. ತೂಕ ಹೆಚ್ಚಿಸಿಕೊಳ್ಳಬೇಕೆಂದಿದ್ದರೆ ಹಾಲಿನ ಜೊತೆ ಕುಡಿಯುವುದು ಉತ್ತಮ.

Weight Loss ಗುರಿ ಇದ್ದರೆ – ನೀರಿನ ಜೊತೆ ಒಳ್ಳೆದು
ನೀರಿನಲ್ಲಿ ಕ್ಯಾಲೊರಿ ಇಲ್ಲ. ಹೀಗಾಗಿ ಕಡಿಮೆ ಕ್ಯಾಲೊರಿಯಲ್ಲಿ ಪ್ರೋಟೀನ್ ಸಿಗುತ್ತದೆ. ತೂಕ ಕಡಿಮೆ ಮಾಡೋವರಿಗೆ ಇದು ಸೂಕ್ತ ಆಯ್ಕೆ.

Digestion ವ್ಯತ್ಯಾಸ
ನೀರಿನ ಜೊತೆ ಕುಡಿದರೆ ಪ್ರೋಟೀನ್ ಬೇಗ ಜೀರ್ಣವಾಗುತ್ತದೆ. ಹಾಲಿನ ಜೊತೆ ಕುಡಿದರೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ವರ್ಕೌಟ್ ನಂತರ ಬೇಗ ಶೋಷಣೆಗೆ ನೀರು ಬೆಸ್ಟ್.

ಯಾವಾಗ ಏನು ಆಯ್ಕೆ ಮಾಡಬೇಕು?
Workout ನಂತರ – ನೀರಿನ ಜೊತೆ
ತೂಕ ಹೆಚ್ಚಿಸಿಕೊಳ್ಳಲು – ಹಾಲಿನ ಜೊತೆ
ತೂಕ ಕಡಿಮೆ ಮಾಡಲು – ನೀರಿನ ಜೊತೆ

ನೀವು ವೆಜಿಟೇರಿಯನ್ ಆಗಿದ್ದರೆ (ಪ್ರೋಟೀನ್ ಸೋರ್ಸ್ ಕಡಿಮೆ ಇರುವುದರಿಂದ), ದಿನದ ಪ್ರೋಟೀನ್ ಪೂರೈಸಲು Whey protein ಸಹಾಯ ಮಾಡಬಹುದು. ನಿಮ್ಮ ಫಿಟ್ನೆಸ್ ಗುರಿಗೆ ತಕ್ಕಂತೆ ಹಾಲು ಅಥವಾ ನೀರು ಆಯ್ಕೆ ಮಾಡಿದರೆ ಸಾಕು.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !