ತಲೆಯಲ್ಲಿ ಹೊಟ್ಟಿನ ಸಮಸ್ಯೆಯಿಂದ ಸಾಕಷ್ಟು ಬಾರಿ ಮುಜುಗರಕ್ಕೊಳಗಾಗುವ ಸಮಸ್ಯೆ ಬರುತ್ತದೆ. ಹೆದರಬೇಡಿ, ಇದಕ್ಕೆ ಪಾರ್ಲರ್‌ಗೆ ಹೋಗಿ ದುಡ್ಡು ಖರ್ಚು ಮಾಡಬೇಕಿಲ್ಲ. ಮನೆಯಲ್ಲಿಯೇ ಇದಕ್ಕೆ ಸಾಕಷ್ಟು ಮದ್ದುಗಳಿವೆ. ಯಾವ ಮದ್ದು ನೋಡಿ..
ಉಪ್ಪು+ನೀರು
ಉಪ್ಪಿಗೆ ನೀರು ಹಾಕಿ ಮಿಕ್ಸ್ ಮಾಡಿ, ತಲೆಗೆ ಹಚ್ಚಿ, ಅನಾವಶ್ಯಕ ಎಣ್ಣೆಯನ್ನು ಉಪ್ಪು ಹೀರುತ್ತದೆ. ಡ್ಯಾಂಡ್ರಫ್ ಕಡಿಮೆ ಆಗುತ್ತದೆ.
ನಿಂಬೆರಸ
ಬುಡದಲ್ಲಿ ಫಂಗಸ್ ಸಮಸ್ಯೆ ಇದ್ದರೆ ನಿಂಬೆ ರಸದಿಂದ ಇದು ಮಾಯವಾಗುತ್ತದೆ. ಜತೆಗೆ ವಿಟಮಿನ್ ಸಿ ನೀಡಿ ಬುಡವನ್ನು ಗಟ್ಟಿ ಮಾಡುತ್ತದೆ, ಕೆರೆತ ಕಡಿಮೆ ಮಾಡುತ್ತದೆ.
ಮೆಂತ್ಯೆಕಾಳು
ಆಂಟಿ ಫಂಗಲ್, ಆಂಟಿ ಬ್ಯಾಕ್ಟೀರಿಯಲ್ ಗುಣಗಳು ಮೆಂತ್ಯೆಯಲ್ಲಿವೆ, ತಿಂಗಳಿಗೆರೆಡು ಬಾರಿ ಮೆಂತ್ಯೆ ನೆನೆಸಿ ರುಬ್ಬಿ ಪ್ಯಾಕ್ ಮಾಡಿ ಹಚ್ಚುವುದು ಉತ್ತಮ.
ಸೋಡಾಪುಡಿ+ನೀರು
ನೀರು ಹಾಗೂ ಸೋಡಾಪುಡಿ ಬಳಸಿ ಪೇಸ್ಟ್ ಮಾಡಿಕೊಳ್ಳಿ, ಹೊಟ್ಟು ಇರುವ ಭಾಗಕ್ಕೆ ಹಚ್ಚಿ ಮೂರು ನಿಮಿಷ ಬಿಟ್ಟು ತೊಳೆಯಿರಿ. ಇದರಿಂದ ಹೊಟ್ಟು ನಿವಾರಣೆಯಾಗುತ್ತದೆ.
ಅಲೋವೆರಾ ಜೆಲ್
ಒಂದು ಸ್ಪೂನ್ ಫ್ರೆಶ್ ಅಲೋವೆರಾ ಜೆಲ್‌ನ್ನು ತಲೆಗೆ ಹಚ್ಚಿ ಮಸಾಜ್ ಮಾಡಿ. ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಿ. ವಾರಕ್ಕೆ ಮೂರು ಬಾರಿ ಈ ರೀತಿ ಮಾಡಿ..