ಡೀಸೆಂಟ್ ಆದ ಕೆಲಸ ಇದೆ, ಆದ್ರೆ ನನ್ ಲೆವೆಲ್‌ಗೆ ಈ ಕೆಲಸ ಅಲ್ಲ, ನನ್ನ ಫ್ರೆಂಡ್ಸ್ ನನಗಿಂತ ದುಪ್ಪಟ್ಟು ಸಂಬಳ ತಗೋತಿದಾರೆ, ಆದರೆ ಓದೋದ್ರಲ್ಲಿ ನಾನು ಅವರಿಗಿಂತ ಮುಂದಿದ್ದೆ! ಮನೆಯಲ್ಲಿ ಎಲ್ಲಾ ಚೆನ್ನಾಗಿದೆ, ಆದರೆ ನನ್ನ ಲೈಫ್ ಎಕ್ಸೈಟಿಂಗ್ ಆಗಿಲ್ಲ, ಟ್ರಿಪ್ ಹೋಗದೇ ವರ್ಷಗಳಾಯ್ತು! ನನ್ನ ಬಳಿ ಇನ್ನೂ ದುಡ್ಡು ಇರಬೇಕಿತ್ತು, ಈಗಿರೋ ಕಾರ್ ಸೆಕೆಂಡ್ ಹ್ಯಾಂಡ್, ಹೊಸ ಕಾರ್ ಬೇಕಿತ್ತು… ಒಂದಲ್ಲಾ ಎರಡಲ್ಲಾ ನಮ್ಮ ಜೀವನದಲ್ಲಿ ಈಗಿರೋ ಯಾವ ವಸ್ತುವೂ, ಯಾವ ವಿಷಯವೂ ಖುಷಿ ಪಡುವಂಥದ್ದಲ್ಲ, ನಮಗೆ ಇನ್ನೇನೋ ಬೇಕು.
ಇದು ಒಬ್ಬಿಬ್ಬರ ಕಥೆ ಅಲ್ಲ, ಕೋಟ್ಯಾಧೀಶ್ವರನಿಗೂ ಜೀವನದಲ್ಲಿ ಬೇರೆ ಏನೋ ಬೇಕಾಗಿದೆ, ಸಿನಿಮಾ ತಾರೆಯರಿಗೂ ಖಿನ್ನತೆ ಇದೆ, ವಿಜ್ಞಾನಿಗಳ ಜೀವನದಲ್ಲಿಯೂ ದುಃಖ ಇದೆ, ಬ್ಯುಸಿನೆಸ್‌ಮೆನ್‌ಗಳು ಕೂಡ ಆತ್ಮಹತ್ಯೆ ಮಾಡ್ಕೋತಾರೆ. ಎಲ್ಲರಿಗೂ ಬೇರೇನೋ ಬೇಕು.
ಇರುವುದನ್ನು ಒಪ್ಪುವುದು ಅಷ್ಟೊಂದು ಕಷ್ಟವಾ? ನಿಮ್ಮ ಜೀವನ ನಾರ್ಮಲ್ ಆಗಿ ಸಾಗುತ್ತಲೇ ಇದೆ ಅಂದುಕೊಳ್ಳಿ, ಬೆಳಗ್ಗೆ ಏಳೋದು, ಅದೇ ತಿಂಡಿ, ಸ್ನಾನ, ಆಫೀಸ್ ಮತ್ತೆ ಮನೆ, ಊಟ, ನಿದ್ದೆ. ಇದೇ ಅಲ್ವಾ ನಿಮ್ಮ ರೊಟೀನ್? ಇಮ್ಯಾಜಿನ್ ಮಾಡಿ ಒಮ್ಮೆ ನಿಮ್ಮ ಆರೋಗ್ಯ ಕೈಕೊಟ್ಟರೆ? ನಿಮ್ಮ ಪ್ರೀತಿಪಾತ್ರರ ಜೀವನದಲ್ಲಿ ಏನಾದ್ರೂ ಏರುಪೇರಾದ್ರೆ? ಆಗ ಎಲ್ಲಾ ನಾರ್ಮಲ್ ಆದ್ರೆ ಸಾಕಪ್ಪ ಎಂದು ಅಂದುಕೊಳ್ಳೋದಿಲ್ವಾ? ಇದು ಹೇಗೆ ಅಂದರೆ ದಿನವೂ ನೀರು ಕುಡಿಯುತ್ತೇವೆ, ಆದರೆ ಒಂದು ದಿನ ಕುಡಿಯೋಕೆ ನೀರು ಸಿಗದೇ ಹೋದ್ರೆ? ಯಾವ ವಿಷಯವನ್ನೂ ಗ್ರಾಂಟೆಂಡ್ ಆಗಿ ತೆಗೆದುಕೊಳ್ಳಬೇಡಿ. ಮಾಮೂಲಿ ಬೋರಿಂಗ್ ಜೀವನವನ್ನೂ ಕೂಡ.
ಈ ಅಭ್ಯಾಸಗಳನ್ನು ಕೂಡ ರೂಡಿಸ್ಕೊಳ್ಳಿ..
- ಸದಾ ನಗ್ತಾ ಇರಿ, ಕಷ್ಟ ನೋವು ಇದ್ದದ್ದೆ, ಯಾವ ವಿಷಯ ನಿಮ್ಮ ಕಂಟ್ರೋಲ್‌ನಲ್ಲಿ ಇಲ್ಲವೋ ಅದರ ಬಗ್ಗೆ ಯೋಚಿಸೋದ್ಯಾಕೆ?
- ವ್ಯಾಯಾಮ, ಜಿಮ್, ಯೋಗ ಏನಾದ್ರೂ ಒಂದು ಅಭ್ಯಾಸ ರೂಢಿಸ್ಕೊಳ್ಳಿ, ಆರೋಗ್ಯಕರ ಜೀವನಕ್ಕೆ ಇದು ಮುಖ್ಯ.
- ನಿದ್ದೆ ವಿಷಯದಲ್ಲಿ ಕಾಂಪ್ರಮೈಸ್ ಬೇಡ, ನಿಮ್ಮ ಮೊಬೈಲ್, ಟಿವಿ, ಸೀರೀಸ್ ಎಲ್ಲಿಗೂ ಓಡಿಹೋಗೋದಿಲ್ಲ. ಅದು ನಿಮ್ಮ ಸೇವಕ, ನೀವು ಅದರದ್ದಲ್ಲ.
- ಒಳ್ಳೆ ಮೂಡ್‌ನಲ್ಲಿ ಊಟ ತಿಂಡಿ ಮಾಡಿ, ತಿಂದದ್ದು ಮೈಗೆ ಹತ್ತಬೇಕಲ್ವಾ?
- ಜೀವನದಲ್ಲಿ ನಿಮ್ಮ ಬಳಿ ಏನೆಲ್ಲಾ ಇದೆ, ಅದಕ್ಕೆ ಧನ್ಯತಾ ಭಾವ ಇರಲಿ, ನಿಮ್ಮ ತಂದೆ ತಾಯಿ, ಗಂಡ, ಬಾಯ್‌ಫ್ರೆಂಡ್, ಅಜ್ಜ ಅಜ್ಜಿ, ಅತ್ತೆ ಮಾವ ಯಾರೇ ಇರಲಿ ಎಲ್ಲರಿಗೂ ಧನ್ಯರಾಗಿರಿ. ಎಷ್ಟೋ ಜನರು ಸಂಬಂಧಗಳಿಗಾಗಿ ಹವಣಿಸ್ತಾರೆ.
- ನಿಮ್ಮವರಿಗೆ ಹೊಗಳುವ ಗುಣ ಬೆಳೆಸಿಕೊಳ್ಳಿ, ಅತಿಯಾಗಿ ಅಲ್ಲ.
- ಕೆಟ್ಟ ಘಳಿಗೆಗಳಲ್ಲಿ ಶಾಂತಿಯಿಂದ ಸ್ವೀಕರಿಸಿ ಒಪ್ಪಿಕೊಳ್ಳಿ
ಈಗ ಹೇಳಿ ಹೇಗಿದೆ ನಿಮ್ಮ ಲೈಫ್?