‘ನ್ಯಾಷನಲ್ ಡ್ಯೂಟಿ ಮುಖ್ಯ ಅಲ್ವಾ?’ ಬುಮ್ರಾ ವಿರುದ್ಧ ನೆಟ್ಟಿಗರ ಆಕ್ರೋಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೀಂ ಇಂಡಿಯಾ ಕ್ರಿಕೆಟರ್ ಜಸ್ಪ್ರೀತ್ ಬುಮ್ರಾ ಹಾಗೂ ಸಂಜನಾ ಗಣೇಶನ್ ದಂಪತಿ ಇಂದಷ್ಟೇ ಮುದ್ದಿನ ಮಗನನ್ನು ಜಗತ್ತಿಗೆ ವೆಲ್‌ಕಮ್ ಮಾಡಿದ್ದಾರೆ. ಟೀಂ ಇಂಡಿಯಾ ಬಿಟ್ಟು ತವರಿಗೆ ಬುಮ್ರಾ ತೆರಳಿದ್ದಕ್ಕೆ ಕಾರಣ ಕಡೆಗೂ ರಿವೀಲ್ ಆಗಿದೆ. ಆದರೆ ಇದರಿಂದಾಗಿಯೇ ಬುಮ್ರಾ ಟ್ರೋಲ್ ಕೂಡ ಆಗುತ್ತಿದ್ದಾರೆ.

ಕೆಲ ವರ್ಷಗಳ ಹಿಂದೆ ವಿಶ್ವಕಪ್ ವೇಳೆ ಎಂ.ಎಸ್. ಧೋನಿ ಪತ್ನಿ ಸಾಕ್ಷಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ವೇಳೆ ಧೋನಿ ವಿಶ್ವಕಪ್ ಆಡುತ್ತಿದ್ದರು. ನ್ಯಾಷನಲ್ ಡ್ಯೂಟಿ ಮುಖ್ಯ, ಅರ್ಧದಲ್ಲಿ ಪಂದ್ಯ ಬಿಟ್ಟು ಹೋಗೋದಿಲ್ಲ ಎಂದು ಧೋನಿ ಹೇಳಿದ್ದರು. ಈ ಘಟನೆಯನ್ನು ನೆನೆಪಿಸಿ ಬುಮ್ರಾ ಮ್ಯಾಚ್ ಬಿಟ್ಟು ಹೋಗಿದ್ದಕ್ಕೆ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಟದ ಕಡೆಗೆ ಧೋನಿ ನೀಡುತ್ತಿದ್ದಂಥ ಕಮಿಟ್‌ಮೆಂಟ್ ಈಗ ಯಾರೂ ನೀಡ್ತಿಲ್ಲ ಎಂದು ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ.

 

ಆದರೆ ಕೆಲವರು ಬುಮ್ರಾ ಬೆನ್ನಿಗೆ ನಿಂತಿದ್ದು, ಅದು ಅವರವರ ಆಯ್ಕೆ ಕುಟುಂಬಕ್ಕೆ ಅವಶ್ಯಕತೆ ಇದ್ದಾಗ ಅವರ ಜೊತೆ ನಿಲ್ಲುವುದು ಕೂಡ ಕರ್ತವ್ಯವೇ ಹೌದು, ಮಗು ಹುಟ್ಟಿದ ಕ್ಷಣವನ್ನು ಅನುಭವಿಸಲು ತಂದೆ ಆಸೆ ಪಟ್ಟಿದ್ದರಲ್ಲಿ ತಪ್ಪಿಲ್ಲ ಎಂದಿದ್ದಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!