ಕೊರೋನಾಕ್ಕಿಂತ ಭೀಕರ ವೈರಸ್ ಸೃಷ್ಟಿಸಲು ತಯಾರಿ ನಡೆಸುತ್ತಿದೆಯಾ ಪಾಕ್-ಚೀನಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೊರೋನಾ ವೈರಸ್ ದಾಳಿಯಿಂದ ಜಗತ್ತು ಈಗಷ್ಟೇ ತಕ್ಕಮಟ್ಟಿಗೆ ಚೇತರಿಕೆ ಕಾಣುತ್ತಿದೆ. ಆದರೆ ಮತ್ತೆ ವಿಶ್ವವನ್ನೇ ಅಲ್ಲಾಡಿಸುವ ಡೆಡ್ಲಿ ವೈರಸ್ ತಯಾರಿಕೆಯಲ್ಲಿ ಚೀನಾ-ಪಾಕ್ ತೊಡಗಿದೆ ಎನ್ನುವ ಆತಂಕಕಾರಿ ವಿಷಯ ಹೊರಬಂದಿದೆ. ಪಾಕ್ ಹಾಗೂ ಚೀನಾ ಸೇರಿ ಜೈವಿಕ ಅಸ್ತ್ರ ಅಭಿವೃದ್ಧಿಪಡಿಸುವ ರಹಸ್ಯ ಸಂಶೋಧನೆ ಮಾಡುತ್ತಿವೆ ಎಂದು ಹಲವು ಜಾಗತಿಕ ಮಾಧ್ಯಮಗಳು ವರದಿ ಮಾಡಿವೆ.

ಪಾಕಿಸ್ತಾನದ ರಾವಲ್‌ಪಿಂಡಿಯಲ್ಲಿ ಇರುವ ಪ್ರಯೋಗಾಲಯದಲ್ಲಿ ಮಾರಣಾಂತಿಕ ವೈರಸ್‌ಗಳ ಪ್ರಯೋಗ ನಡೆಯುತ್ತದೆ. ಇಲ್ಲಿಯೇ ಕೊರೋನಾಕ್ಕಿಂತ ಜಗತ್ತಿಗೆ ಹಾನಿ ಉಂಟುಮಾಡುವ ವೈರಸ್‌ನ್ನು ಚೀನಾ ಅಭಿವೃದ್ಧಿಪಡಿಸುತ್ತಿದೆ ಎನ್ನಲಾಗಿದೆ.

ಸಾಮಾನ್ಯವಾಗಿ ಈ ಲ್ಯಾಬ್‌ನಲ್ಲಿ ಮಾರಣಾಂತಿಕ ಸೋಂಕುಗಳಿಗೆ ಕಾರಣವಾಗುವ ಸೋಂಕುಕಾರಕಗಳ ಅಧ್ಯಯನ ನಡೆಸಲಾಗುತ್ತದೆ. ಇಲ್ಲಿ ಜೈವಿಕ ಅಸ್ತ್ರ ಅಭಿವೃದ್ಧಿಪಡಿಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!