VIDEO | ಬದಲಾಗ್ತಿದ್ಯಾ ಆರ್‌ಸಿಬಿ ಹೆಸರು? ಕ್ಲೂ ಬಿಟ್ಟುಕೊಟ್ಟ ರಶ್ಮಿಕಾ ಮಂದಣ್ಣ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿನ್ನೆಯಷ್ಟೇ ಆರ್‌ಸಿಬಿ ಗರ್ಲ್ಸ್ ಟೀಂಗೆ ಕಪ್ ತಂದು ಕೊಟ್ಟಿದ್ದಾರೆ.ಇದರಿಂದಾಗಿ ಬೀದಿ ಬೀದಿಯಲ್ಲಿ ಅಭಿಮಾನಿಗಳು ಡ್ಯಾನ್ಸ್ ಮಾಡಿ, ಪಟಾಕಿ ಹೊಡೆದು ಸಂಭ್ರಮಿಸಿದ್ದಾರೆ.

ಆರ್‌ಸಿಬಿ ಬಗ್ಗೆ ರಶ್ಮಿಕಾ ಕುತೂಹಲಕಾರಿ ಪೋಸ್ಟ್ ಒಂದನ್ನು ಮಾಡಿದ್ದು, ಟೀಂ ಹೆಸರು ಬದಲಾವಣೆ ಆಗ್ತಿದ್ಯಾ ಅನ್ನೋ ಅನುಮಾನ ಎಲ್ಲರನ್ನೂ ಕಾಡಿದೆ.

ರಶ್ಮಿಕಾ ಮಂದಣ್ಣ ವಿಡಿಯೋ ಇದಾಗಿದ್ದು, ರಾಯಲ್ ಚಾಲೆಂಜರ‍್ಸ್ ಬ್ಯಾಂಗ್ಳೂರ್ ಎಂದಿರುವ ಹೆಸರನ್ನು ರಾಯಲ್ ಚಾಲೆಂಜರ‍್ಸ್ ಬೆಂಗಳೂರು ಎಂದು ಬದಲಾವಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ.

ವಾಶ್‌ರೂಮ್ ಮಿರರ್ ಮೇಲೆ ರಾಯಲ್ ಚಾಲೆಂಜರ‍್ಸ್ ಬ್ಯಾಂಗ್ಳೂರ್ ಎಂದು ಬರೆಯಲಾಗಿದ್ದು, ರಶ್ಮಿಕಾ ಮಂದಣ್ಣ ಬೆಂಗಳೂರು ಎನ್ನೋದನ್ನು ಬಾಯಿಂದ ಉಫ್ ಎಂದು ಅಳಿಸುತ್ತಾರೆ. ಬ್ಯಾಂಗ್ಳೂರ್ ಬದಲು ಬೆಂಗಳೂರು ಎಂದು ಬದಲಾವಣೆ ಮಾಡುತ್ತಾರೆ ಎಂದು ಹೇಳಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!