ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿರಿಯ ನಾಯಕ ಜಗದೀಶ್ ಶೆಟ್ಟರ್ ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ.
ಕಾಂಗ್ರೆಸ್ ಸೇರ್ಪಡೆ ಬೆನ್ನಲ್ಲೇ ಶೆಟ್ಟರ್‌ಗೆ ಟಿಕೆಟ್ ಕೂಡ ನೀಡಾಗಿದೆ. ಬಿಜೆಪಿ ಇದ್ದಕ್ಕಿಂತೆಯೇ ಟಿಕೆಟ್ ಇಲ್ಲ ಎಂದರೆ, ಮನಸ್ಸಿಗೆ ನೋವಾಗಿದೆ ಎಂದು ಶೆಟ್ಟರ್ ಹೇಳಿದ್ದು, ಸಿ.ಟಿ. ರವಿ ಈ ಬಗ್ಗೆ ಮಾತನಾಡಿದ್ದಾರೆ.
ಕಾಂಗ್ರೆಸ್ ಸೇರಿರೋದು ದುರದೃಷ್ಟಕರ, ಒಬ್ಬ ವ್ಯಕ್ತಿಗೆ ಪಕ್ಷ ಏನೆಲ್ಲಾ ಮಾಡಬಹುದೋ ಅದನ್ನೆಲ್ಲಾ ಬಿಜೆಪಿ ಮಾಡಿದೆ, ಈ ರೀತಿ ಪಕ್ಷ ತೊರೆದು ಜಗತ್ತಿಗೆ ಏನು ಸಂದೇಶ ನೀಡ್ತಿದ್ದಾರೆ? ಹಾಗಿದ್ರೆ ಸೈದ್ಧಾಂತಿಕವಾಗಿ ಬಿಜೆಪಿ ಜೊತೆ ಶೆಟ್ಟರ್ ಇರಲಿಲ್ವಾ? ಇದು ವೈಯಕ್ತಿಕ ಲಾಭ ಅಲ್ವಾ? ಇವರಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಬಿಜೆಪಿ ಕಟ್ಟಿ ಬೆಳೆಸಿದ ಇತಿಹಾಸದಿಂದ ಶೆಟ್ಟರ್ ಸ್ಥಾನ ಕಳೆದುಕೊಂಡಿದ್ದಾರೆ. ಪಕ್ಷ ಎಲ್ಲವನ್ನೂ ರಿಕವರಿ ಮಾಡಿಕೊಳ್ಳುತ್ತದೆ, ಆದರೆವ್ಯಕ್ತಿಗೆ ರಿಕವರಿ ಕಷ್ಟ ಎಂದಿದ್ದಾರೆ.