September 14, 2026
Monday, September 14, 2026
spot_img

ತೂಕ ಇಳಿಕೆಗೆ ರಾತ್ರಿ ಊಟ ಬಂದ್ ಮಾಡುವುದು ಸರಿಯಾದ ಹಾದಿಯೇ?

ರಾತ್ರಿ ಊಟ ತಪ್ಪಿಸುವುದು ಅಥವಾ ಸಂಜೆ ಬೇಗ ಊಟ ಮುಗಿಸುವುದು ಇತ್ತೀಚಿನ ದಿನಗಳಲ್ಲಿ ‘ಇಂಟರ್ಮಿಟೆಂಟ್ ಫಾಸ್ಟಿಂಗ್’ ರೂಪದಲ್ಲಿ ಪ್ರಸಿದ್ಧಿ ಪಡೆಯುತ್ತಿದೆ. ರಾತ್ರಿ ಲಘು ಆಹಾರ ಸೇವನೆ ಅಥವಾ ಊಟ ಮಾಡದಿರುವುದರಿಂದ ದೇಹಕ್ಕೆ ಲಭಿಸುವ ಪ್ರಮುಖ ಆರೋಗ್ಯ ಪ್ರಯೋಜನಗಳು ಇಲ್ಲಿವೆ:

1. ತೂಕ ಇಳಿಕೆ ಮತ್ತು ಕೊಬ್ಬು ಕರಗುವಿಕೆ

ರಾತ್ರಿ ಊಟ ಮಾಡದಿರುವುದರಿಂದ ಕ್ಯಾಲೋರಿ ಸೇವನೆ ಕಡಿಮೆಯಾಗುತ್ತದೆ. ದೇಹವು ರಾತ್ರಿಯ ಸಮಯದಲ್ಲಿ ಶಕ್ತಿಗಾಗಿ ಶೇಖರಣೆಗೊಂಡಿರುವ ಕೊಬ್ಬನ್ನು ಬಳಸಿಕೊಳ್ಳಲು ಪ್ರಾರಂಭಿಸುತ್ತದೆ. ಇದರಿಂದ ಹೊಟ್ಟೆಯ ಸುತ್ತಲಿನ ಕೊಬ್ಬು ಶೀಘ್ರವಾಗಿ ಕರಗುತ್ತದೆ.

2. ಜೀರ್ಣಾಂಗ ವ್ಯವಸ್ಥೆಗೆ ವಿಶ್ರಾಂತಿ

ನಿರಂತರವಾಗಿ ಕೆಲಸ ಮಾಡುವ ಜೀರ್ಣಾಂಗವೂ ಸೇರಿದಂತೆ ಹೊಟ್ಟೆಯ ಅಂಗಾಂಗಗಳಿಗೆ ವಿಶ್ರಾಂತಿ ಸಿಗುತ್ತದೆ. ಇದು ಅಜೀರ್ಣ, ಗ್ಯಾಸ್ಟ್ರಿಕ್, ಎದೆ ಉರಿ ಮತ್ತು ಅಸಿಡಿಟಿ ಸಮಸ್ಯೆಯನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

3. ಇನ್ಸುಲಿನ್ ಪ್ರಮಾಣ ನಿಯಂತ್ರಣ

ರಾತ್ರಿ ಆಹಾರ ಸೇವಿಸದಿರುವುದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿಡುತ್ತದೆ. ಇದು ಇನ್ಸುಲಿನ್ ಸೆನ್ಸಿಟಿವಿಟಿಯನ್ನು ಹೆಚ್ಚಿಸಿ, ಮಧುಮೇಹ (Diabetes) ನಿಯಂತ್ರಣಕ್ಕೆ ಸಹಕಾರಿಯಾಗುತ್ತದೆ.

4. ಸುಖಕರ ನಿದ್ರೆ ಮತ್ತು ದೇಹದ ಚೇತರಿಕೆ

ಬಾರಿಯಾದ ಊಟ ಸೇವಿಸಿ ಮಲಗುವುದರಿಂದ ನಿದ್ರಾಹೀನತೆ ಉಂಟಾಗಬಹುದು. ಲಘು ಹೊಟ್ಟೆಯಲ್ಲಿ ಮಲಗುವುದರಿಂದ ನಿದ್ರೆಯ ಗುಣಮಟ್ಟ ಹೆಚ್ಚುತ್ತದೆ. ನಿದ್ರೆಯಲ್ಲಿ ದೇಹದ ಜೀವಕೋಶಗಳು ವೇಗವಾಗಿ ಚೇತರಿಸಿಕೊಳ್ಳುತ್ತವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !