ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಶ್ರೀಲೀಲಾ ಕನ್ನಡದಿಂದ ತಮ್ಮ ಕರಿಯರ್ ಆರಂಭಿಸಿದ್ದಾರೆ. ಆದರೆ ಅದಾದ ನಂತರ ನಟಿ ತೆಲುಗು ಸಿನಿಮಾದಲ್ಲಿ ನಟಿಸಿದ್ದಾರೆ. ಇತ್ತ ಪುಷ್ಪಾ-2 ಸಿನಿಮಾದಲ್ಲಿ ಕಿಸಿಕ್ ಹಾಡಿಗೆ ಫೇಮಸ್ ಆಗಿದ್ದ ಶ್ರೀಲೀಲಾಗೆ ಬಾಲಿವುಡ್‌ನಿಂದ ಸಾಕಷ್ಟು ಆಫರ್ ಬಂದಿತ್ತು.
ಕಾರ್ತಿಕ್ ಆರ್ಯನ್ ಜೊತೆಗೆ ಆಶಿಕಿ-3 ಸಿನಿಮಾದಲ್ಲಿ ಶ್ರೀಲೀಲಾ ನಟಿಸ್ತಿದ್ದಾರೆ. ಇನ್ನು ಕಾರ್ತಿಕ್ ಆರ್ಯನ್ ಜೊತೆಗೆ ಪತಿ ಪತ್ನಿ ಔರ್ ವೋ-2 ಸಿನಿಮಾಕ್ಕೂ ಶ್ರೀಲೀಲಾ ಆಯ್ಕೆಯಾಗಿದ್ದರು. ಆದರೆ ಈ ಸಿನಿಮಾದಿಂದ ಅವರನ್ನು ಕೈಬಿಡಲಾಗಿದೆ ಎನ್ನುವ ಸುದ್ದಿ ಹರಿದಾಡಿದೆ. ಶ್ರೀಲೀಲಾ ಬದಲಾಗಿ ಉಯ್ಯಮ್ಮಾ ಸಾಂಗ್ ನಟಿ ರಾಶಾ ತಂಡಾನಿ ಆಯ್ಕೆಯಾಗಿದೆ ಎನ್ನಲಾಗಿದೆ.
ಭೇಷ್ ಎನ್ನುತ್ತಲೇ ಬೆನ್ನುತಟ್ಟಿ ಒಳಗೆ ಕರೆದುಕೊಂಡಿದ್ದ ಬಾಲಿವುಡ್‌ಗೆ ಶ್ರೀಲೀಲಾ ಇಷ್ಟು ಬೇಗ ಹೊರಗಿನವರಾದ್ರಾ ಎಂದು ನೆಟ್ಟಿಗರು ಕಮೆಂಟ್ ಮಾಡ್ತಿದ್ದಾರೆ.