ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಗ್ಲಿಷ್ ಶಬ್ದಕೋಶದ ನಿರರ್ಗಳ ಬಳಕೆಗೆ ಹೆಸರುವಾಸಿಯಾಗಿರುವ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಕುಸ್ತಿಪಟು ವಿನೇಶ್ ಫೋಗಟ್ ಕ್ರೀಡೆಯಿಂದ ನಿವೃತ್ತಿ ಘೋಷಿಸಿದ ನಂತರ ಹಿಂದಿಯಲ್ಲಿ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ.
“इस सिस्टम से पक गई है ये लड़की, लड़ते-लड़ते थक गई है ये लड़की… (ಈ ಹುಡುಗಿ ವ್ಯವಸ್ಥೆಯಿಂದ ಬೇಸತ್ತಿದ್ದಾಳೆ. ಹೋರಾಟದಿಂದ ಬೇಸತ್ತಿದ್ದಾಳೆ)” ಎಂದು ತರೂರ್ X ನಲ್ಲಿ ಬರೆದಿದ್ದಾರೆ.
ಮಂಗಳವಾರ ವಿನೇಶ್ ಫೋಗಟ್ ಅವರು ಒಲಿಂಪಿಕ್ಸ್‌ನಲ್ಲಿ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಅವರು ಮೊದಲ ಬಾರಿಗೆ ಜಪಾನ್‌ನ ಹಾಲಿ ವಿಶ್ವ ಮತ್ತು ಒಲಿಂಪಿಕ್ ಚಾಂಪಿಯನ್ ಯುಯಿ ಸುಸಾಕಿಯನ್ನು ಸೋಲಿಸಿದರು, ನಂತರ, ಅವರು ಸೆಮಿಫೈನಲ್ ಪಂದ್ಯದಲ್ಲಿ ಕ್ಯೂಬಾದ ಯುಸ್ನೆಲಿಸ್ ಗುಜ್ಮನ್ ಅವರನ್ನು 5-0 ಅಂತರದಿಂದ ಸೋಲಿಸಿದರು.
इस सिस्टम से पक गई है ये लड़की
लड़ते-लड़ते थक गई है ये लड़की…#SorryVinesh! https://t.co/PkAGIqv1HW pic.twitter.com/59N38rT3Lx— Shashi Tharoor (@ShashiTharoor) August 8, 2024