ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೀಸಲಾತಿ ವಿರೋಧಿ ಹೋರಾಟ ಹಿಂಸಾಚಾರಕ್ಕೆ ತಿರುಗಿದೆ. ಈ ವರೆಗೆ ಸುಮಾರು 200 ಕ್ಕೂ ಹೆಚ್ಚು ಜನ ಜೀವ ಹೋಗಿದೆ.
ಜನರ ಈ ಹುಚ್ಚಾಟಕ್ಕೆ ಸಿನಿಮಾ ನಿರ್ಮಾಪಕ ಮತ್ತು ಸ್ಟಾರ್ ನಟನಾಗಿರುವ ಆತನ ಮಗನನ್ನು ಬಲಿಯಾಗಿದ್ದಾರೆ. ಪೊಲೀಸರಿಗೆ ವಿಷಯ ತಿಳಿದರೂ ಸಹ ಹೋಗಿ ಕಾಪಾಡಲು ಆಗಲಿಲ್ಲ ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಬಾಂಗ್ಲಾದೇಶದಲ್ಲಿನ ಹಿಂಸಾಚಾರದಲ್ಲಿ ನಟ ಶಾಂತೊ ಖಾನ್ ಹಾಗೂ ಅವರ ತಂದೆ, ನಿರ್ಮಾಪಕ ಸಲೀಮ್ ಖಾನ್ ಅವರನ್ನು ಹತ್ಯೆ ಮಾಡಲಾಗಿದೆ. ಬಾಲಿಯಾ ಯೂನಿಯನ್‌ನಲ್ಲಿರುವ ಫರಕ್ಕಾಬಾದ್ ಬಜಾರ್‌ಗೆ ಸೆಲಿಮ್ ಮತ್ತು ಶಾಂಟೊ ತಮ್ಮ ಹಳ್ಳಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು ಎಂದು ತಿಳಿಸಿವೆ.
ಸ್ಥಳೀಯರು ಅವರನ್ನು ತಡೆಯಲು ಪ್ರಯತ್ನಿಸಿದಾಗ, ಅವರು ತಪ್ಪಿಸಿಕೊಳ್ಳಲು ಗುಂಡು ಹಾರಿಸಿದರು. ಆದರೆ, ಸಮೀಪದ ಬಗರಬಜಾರ್ ಪ್ರದೇಶವನ್ನು ತಲುಪಿದಾಗ, ಆಕ್ರೋಶಗೊಂಡ ಗುಂಪು ಅವರನ್ನು ಹಿಡಿದು ಕೊಂದಿತು ಎಂದು ಹೇಳಲಾಗಿದೆ.