SAVE MONEY | ಸಂಬಳ ಬಂದ ವಾರದಲ್ಲೇ ದುಡ್ಡೆಲ್ಲಾ ಖಾಲಿ ಆಗ್ತಿದ್ಯಾ? ಈ ವಿಧಾನ ಅನುಸರಿಸಿ ಹಣ ಉಳಿಸಿ..

ಸಂಬಳ ಬಂದಿದೆ ಎಂದು ಖುಷಿ ಪಡಬೇಕು, ನಮಗೆ ಅಂತ ದುಡ್ಡೇನೂ ಉಳಿಯೋದಿಲ್ಲ ಆದರೆ ಕಮಿಟ್‌ಮೆಂಟ್‌ಗಳಿಗೆ ದುಡ್ಡು ಕೊಡಬೇಕಲ್ಲಾ? ಉಳಿಸೋಕಾಗ್ತಿಲ್ಲ ಹಾಗಂತ ಸಾಲ ಕೂಡ ಮಾಡ್ತಿಲ್ಲ.. ನಿಮ್ಮದೂ ಇದೇ ಸಮಸ್ಯೆನಾ? ದುಡ್ಡನ್ನು ಉಳಿಸೋಕೆ ಕೆಲ ಟಿಪ್ಸ್ ಇಲ್ಲಿದೆ..

  • ಮನೆಯಲ್ಲೇ ಅಡುಗೆ ಮಾಡಿ, ಹಿಂದಿನ ದಿನವೇ ಅಡುಗೆ ಪ್ಲಾನ್ ಮಾಡಿ. 250 ರೂಪಾಯಿ ಕೊಟ್ಟು ಒಂದು ಪಿಝಾ ತಿನ್ನಬಹುದು, ಆದರೆ ಅದೇ ದುಡ್ಡಿಗೆ ನಾಲ್ಕು ಕೆಜಿ ಅಕ್ಕಿ ಕೊಳ್ಳಬಹುದು.
  • ಸಣ್ಣ ಪುಟ್ಟ ಸಾಲಗಳಿದ್ರೆ ತೀರಿಸಿಕೊಳ್ಳಿ, ಮತ್ತೆ ಮೇಲೆ ಸಾಲ ಮಾಡಿ ದೊಡ್ಡದು ಮಾಡಿಕೊಳ್ಳಬೇಡಿ.
  • ಸಾಲ ಮಾಡುವ ಸಂದರ್ಭ ಬಾರದಂತೆ ನೋಡಿಕೊಳ್ಳಿ, ಇರೋದನ್ನು ಉಳಿಸೋದು ಮೊದಲ ಆದ್ಯತೆಯಾಗಿರಲಿ.
  • ನಿಮಗೆ ಅಂತ, ನಿಮ್ಮ ಫ್ಯೂಚರ್‌ಗೆ ಅಂತ ಇಷ್ಟು ಹಣ ಎತ್ತಿಟ್ಟುಬಿಡಿ. ಅದನ್ನು ಮುಟ್ಟಬೇಡಿ.
  • ಹೊಸತನ್ನೇ ಯಾಕೆ ಕೊಳ್ಳಬೇಕು? ಕೆಲವೊಮ್ಮೆ ಸೆಕೆಂಡ್ ಹ್ಯಾಂಡ್ ಐಟಮ್‌ಗಳನ್ನೂ ಖರೀದಿ ಮಾಡಿ.
  • ಜಿಮ್‌ಗೆ ಹೋಗೋ ಬದಲು ಮನೆಯಲ್ಲೇ ವರ್ಕೌಟ್ ಶುರು ಮಾಡಿ.
  • ದಿನಸಿ ಸಾಮಾನು ಆಗಾಗ ಸ್ವಲ್ಪ ಸ್ವಲ್ಪ ಕೊಳ್ಳಬೇಡಿ, ಆಫರ‍್ಸ್ ನೋಡಿ ಒಮ್ಮೆಲೇ ಕೊಳ್ಳಿ.
  • ಅಂಗಡಿಗಳಲ್ಲಿ ಸೇಲ್ಸ್, 50% ಆಫ್ ಇದ್ದೇ ಇರುತ್ತದೆ. ಅವುಗಳು ಬರುವ ತನಕ ಕಾದಿದ್ದು ಆಮೇಲೆ ಕೊಂಡುಕೊಳ್ಳಿ.
  • ಕ್ಯಾಬ್ ಬದಲು ಬೈಕ್, ಬಸ್ ಅಥವಾ ವಾಕಿಂಗ್ ಮಾಡಿ.
  • ಸಿಕ್ಕಾಪಟ್ಟೆ ಹಸಿವಾಗಿದ್ದಾಗ ಶಾಪಿಂಗ್ ಹೋಗಬೇಡಿ, ನಿಮ್ಮ ಮೆದುಳಿಗೆ ಎಲ್ಲವೂ ಬೇಕು ಎಂದೇ ಅನಿಸುತ್ತದೆ. ಹೊಟ್ಟೆ ತುಂಬಿದ ನಂತರ ಶಾಪಿಂಗ್ ಹೋಗಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!