September 8, 2026
Tuesday, September 8, 2026
spot_img

ಚಿಂತೆ ಬಿಡಿ, ತಿಂಡಿ ಮಾಡಿ 82 | ಪಲಾವ್‌ ಮಸಾಲೆ ಫ್ಲೇವರ್‌ ಹೆಚ್ಚು ಅನಿಸ್ತಾ ಇದೆಯಾ? ಹಾಗಿದ್ರೆ ಈ ವೈಟ್‌ ಪಲಾವ್‌ ಟ್ರೈ ಮಾಡಿ ನೋಡಿ

ಸಾಮಾಗ್ರಿಗಳು
ಮಿಕ್ಸಿಗೆ : ಈರುಳ್ಳಿ, ಹಸಿಮೆಣಸು, ಶುಂಠಿ, ಕಾಳುಮೆಣಸು, ಬೆಳ್ಳುಳ್ಳಿ, ಚಕ್ಕೆ, ಲವಂಗ, ಏಲಕ್ಕಿ, ಸೋಂಪು ಹಾಕಿ ರುಬ್ಬಿ ಎತ್ತಿಟ್ಟುಕೊಳ್ಳಿ

ಒಗರಣೆಗೆ : ಎಣ್ಣೆ, ಚಕ್ಕೆ, ಲವಂಗ, ಏಲಕ್ಕಿ, ಮರಾಠಿ ಮೊಗ್ಗು, ಪಲಾವ್‌ ಎಲೆ, ಸ್ಟಾರ್‌ ಅನೀಸ್‌, ಈರುಳ್ಳಿ, ಪುದೀನ, ಕೊತ್ತಂಬರಿ ಸೊಪ್ಪು, ಟೊಮ್ಯಾಟೊ, ತರಕಾರಿಗಳು

ಮಾಡುವ ವಿಧಾನ
ಮೊದಲು ಮಿಕ್ಸಿಗೆ ಮೇಲೆ ಹೇಳಿರುವ ಪದಾರ್ಥಗಳನ್ನು ಹಾಕಿ ರುಬ್ಬಿ ಇಟ್ಟುಕೊಳ್ಳಿ
ಆನಂತರ ಕುಕ್ಕರ್‌ಗೆ ಎಣ್ಣೆ, ತುಪ್ಪ, ಚಕ್ಕೆ, ಲವಂಗ, ಏಲಕ್ಕಿ, ಮರಾಠಿ ಮೊಗ್ಗು, ಪಲಾವ್‌ ಎಲೆ, ಸ್ಟಾರ್‌ ಅನೀಸ್‌ ಹಾಕಿ ಮಿಕ್ಸ್‌ ಮಾಡಿ
ನಂತರ ಈರುಳ್ಳಿ, ಪುದೀನ, ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್‌ ಮಾಡಿ, ನಂತರ ಟೊಮ್ಯಾಟೊ ಹಾಕಿ, ಆಮೇಲೆ ತರಕಾರಿಗಳನ್ನು ಹಾಕಿ ಮಿಕ್ಸ್‌ ಮಾಡಿ
ಉಪ್ಪು ಹಾಗೂ ಗರಂ ಮಸಾಲಾ ಹಾಕಿ, ನಂತರ ಅಕ್ಕಿ ಹಾಕಿ, ಅಳತೆಗೆ ತಕ್ಕಷ್ಟು ನೀರು ಹಾಕಿ
ಎರಡು ವಿಶಲ್‌ ಕೂಗಿಸಿದ್ರೆ ಪಲಾವ್‌ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !