ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್ ಮುಯಿಝು ಪದಚ್ಯುತಿ ಪಕ್ಕಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್ ಮುಯಿಝು ಅಧಿಕಾರ ಕಳೆದುಕೊಳ್ಳುವುದು ಬಹುತೇಕ ಖಚಿತವಾಗಿದೆ. ಮಾಲ್ಡೀವ್ಸ್‌ ದೇಶದ ವಿರೋಧ ಪಕ್ಷ ಹಾಗೂ ಸಂಸತ್ತಿನಲ್ಲಿ ದೊಡ್ಡ ಮಟ್ಟದ ಬಹುಮತವನ್ನು ಹೊಂದಿರುವ ಮಾಲ್ಡೀವಿಯನ್‌ ಡೆಮಾಕ್ರಟಿಕ್‌ ಪಾರ್ಟಿ (ಎಂಡಿಪಿ), ಅಧ್ಯಕ್ಷ ಮೊಹಮದ್‌ ಮುಯಿಝು ವಿರುದ್ಧ ಮಹಾಭಿಯೋಗ ಅಂದರೆ ಇಂಪೀಚ್‌ಮೆಂಟ್‌ ನಿರ್ಣಯವನ್ನು ಸಲ್ಲಿಸಲು ಸಜ್ಜಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಸೋಮವಾರ ಮಧ್ಯಾಹ್ನ ಮಹಾಭಿಯೋಗದ ನಿರ್ಣಯಕ್ಕೆ ಅಗತ್ಯವಾಗಿರುವಷ್ಟು ಸಹಿಗಳನ್ನು ಪಡೆಯಲು ಎಂಡಿಪಿ ಯಶಸ್ವಿಯಾಗಿದೆ. ಕೆಲವು ಡೆಮೋಕ್ರಾಟ್‌ಗಳು ಕೂಡ ಇದನ್ನು ಬೆಂಬಲಿಸಿದ್ದಾರೆ. ಆದರೆ, ಈ ದೇಶದ ವಿರೋಧಪಕ್ಷಗಳು ಈ ನಿರ್ಣಯವನ್ನು ಇನ್ನು ಸಂಸತ್ತಿನಲ್ಲಿ ಸಲ್ಲಿಕೆ ಮಾಡುವುದು ಮಾತ್ರವೇ ಬಾಕಿ ಉಳಿದಿದೆ.

ಸರ್ಕಾರದ ಪರ ಪಕ್ಷಗಳಾದ ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ (ಪಿಎನ್‌ಸಿ) ಮತ್ತು ಪ್ರೋಗ್ರೆಸ್ಸಿವ್ ಪಾರ್ಟಿ ಆಫ್ ಮಾಲ್ಡೀವ್ಸ್ (ಪಿಪಿಎಂ) ಸಂಸದರು ಕಲಾಪಕ್ಕೆ ಅಡ್ಡಿಪಡಿಸಿದ್ದು ಮಾತ್ರವಲ್ಲದೆ, ಸ್ಪೀಕರ್‌ಗಳ ಕಿವಿಗೆ ತುತ್ತೂರಿ ಊದುವ ಮೂಲಕ ಪ್ರತಿಭಟನೆ ಮಾಡಿದ್ದರು.

ಮಾಲ್ಡೀವ್ಸ್ ಮೂಲದ ನ್ಯೂಸ್ ಪ್ರಕಾರ, ಎಂಡಿಪಿ ಮತ್ತು ಡೆಮೋಕ್ರಾಟ್‌ಗಳ ಪ್ರತಿನಿಧಿಗಳನ್ನು ಒಳಗೊಂಡ ಒಟ್ಟು 34 ಸದಸ್ಯರು ಅಧ್ಯಕ್ಷರನ್ನು ಮಹಾಭೀಯೋಗ ಮಾಡುವ ನಿರ್ಣಯಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಅಧ್ಯಕ್ಷ ಮುಯಿಝು ಅವರ ಸಂಪುಟದಲ್ಲಿರುವ ಸಚಿವರಿಗೆ ಸಂಸತ್ತಿನ ಅನುಮೋದನೆ ಪಡೆಯಲು ಕರೆದಿದ್ದ ವಿಶೇಷ ಅಧಿವೇಶನದಲ್ಲಿ ಈ ಘರ್ಷಣೆ ಸಂಭವಿಸಿದೆ.

ಮಾಲ್ಡೀವ್ಸ್ ಸಂಸತ್ತು ಇತ್ತೀಚೆಗೆ ತನ್ನ ಸ್ಥಾಯಿ ಆದೇಶಗಳನ್ನು ತಿದ್ದುಪಡಿ ಮಾಡಿದ್ದು, ಸಂಸದರಿಗೆ ಮಹಾಭಿಯೋಗ ನಿರ್ಣಯವನ್ನು ಮಂಡಿಸಲು ಇದು ಸುಲಭವಾಗಿದೆ. ಎಂಡಿಪಿ ಮತ್ತು ಡೆಮೋಕ್ರಾಟ್‌ಗಳು ಒಟ್ಟು 56 ಸಂಸದರನ್ನು ಹೊಂದಿದ್ದಾರೆ. ಇದರಲ್ಲಿ 43 ಮಂದಿ ಎಂಡಿಪಿ ಸಂಸದರಾಗಿದ್ದರೆ, 12 ಮಂದಿ ಡೆಮೋಕ್ರಾಟ್‌ಗಳಾಗಿದ್ದಾರೆ. ಮಾಲ್ಡೀವ್ಸ್ ಸಂವಿಧಾನ ಮತ್ತು ಸಂಸತ್ತಿನ ಸ್ಥಾಯಿ ಆದೇಶಗಳ ಪ್ರಕಾರ, ಅಧ್ಯಕ್ಷರನ್ನು 56 ಮತಗಳೊಂದಿಗೆ ಮಹಾಭಿಯೋಗ ಮಾಡಬಹುದು ಎಂದು ಹೇಳುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!