ಪೆನ್‌ಡ್ರೈವ್‌ ಪ್ರಕರಣ | ರೇವಣ್ಣ-ಸಿದ್ದರಾಮಯ್ಯ ನಡುವೆ ಒಪ್ಪಂದ ಇದ್ಯಾ? : ಪ್ರಲ್ಹಾದ ಜೋಶಿ

ದಿಗಂತ ವರದಿ ಹುಬ್ಬಳ್ಳಿ:

ರೇವಣ್ಣ ಮತ್ತು ಸಿದ್ದರಾಮಯ್ಯ ನಡುವೆ ಒಪ್ಪಂದವಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಹುಬ್ಬಳ್ಳಿಯಲ್ಲಿ ಮಾದ್ಯಮದೊಂದಿಗೆ ಮಾತನಾಡಿದ ಸಚಿವರು, ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕಾಂಗ್ರೆಸ್ ಅತ್ಯಂತ ಬೇಜವಾಬ್ದಾರಿ ಆರೋಪ ಮಾಡುತ್ತಿದೆ ಎಂದು ಪ್ರತಿಕ್ರಿಯಿಸಿದರು. ಪ್ರಜ್ವಲ್ ರೇವಣ್ಣ, FIR ಆಗುವ ಮೊದಲೇ ಹೋಗಿದ್ದಾರೆ. ರಾಜ್ಯ ಪೊಲೀಸರು ತಕ್ಷಣವೇ ಎಫ್ಐಆರ್ ಹಾಕಬೇಕಿತ್ತು. ಹೋಗಲು ಏಕೆ ಬಿಟ್ಟರು? ಎಂದು ಜೋಶಿ ಪ್ರಶ್ನಿಸಿದರು.

ಪ್ರಜ್ವಲ್ ವಿದೇಶಕ್ಕೆ ಹಾರುತ್ತಾರೆಂಬುದು ಕೇಂದ್ರಕ್ಕೆ ಕನಸು ಬೀಳುತ್ತದೆಯೇ? ರಾಜ್ಯ ಸರ್ಕಾರ ತನ್ನ ತಪ್ಪನ್ನು ಕೇಂದ್ರದ ಮೇಲೆ ಹಾಕಲು ನೋಡುತ್ತಿದೆ ಎಂದು ಜೋಶಿ ಹೇಳಿದರು. ಪ್ರಜ್ವಲ್ ರೇವಣ್ಣ ವಿರುದ್ಧ ಗಂಭೀರ ಆರೋಪ ಕೇಳಿ ಬಂದ ತತ್ ಕ್ಷಣವೇ ರಾಜ್ಯ ಪೊಲೀಸರು ಏಕೆ FIR ಹಾಕಲಿಲ್ಲ? ಎಂದು ಪ್ರಶ್ನಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!