ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ವಿದ್ಯಾಭರಣ್ ಹಾಗೂ ವೈಷ್ಣವಿ ನಿಶ್ಚಿತಾರ್ಥ ಮುರಿದುಹೋಗಿದೆ. ಇದಕ್ಕೆ ಒಂದು ಯುವತಿಯ ಆಡಿಯೋ ಕಾರಣ ಎಂದು ಹೇಳಲಾಗಿದೆ.
ಆಡಿಯೋದಲ್ಲಿ ಯುವತಿಯೊಬ್ಬಳು ವಿದ್ಯಾಭರಣ್ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾಳೆ. ಈ ಬಗ್ಗೆ ವಿದ್ಯಾಭರಣ್ ಪ್ರತಿಕ್ರಿಯೆ ನೀಡಿದ್ದು ಇವರು ಯಾರೆಂದು ನನಗೆ ಗೊತ್ತಿಲ್ಲ. ನನ್ನ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಇದರಿಂದ ಸಂಬಂಧ ಮುರಿದಿದೆ. ಪೋಷಕರಿಗೆ ಮುಜುಗರವಾಗಿದೆ.
ಪೊಲಿಸರಿಗೆ ಈಗಾಗಲೇ ದೂರು ನೀಡಿದ್ದೇನೆ. ಆ ಧ್ವನಿ ಯಾರದ್ದೆಂದು ಕಂಡುಹಿಡಿಯುತ್ತೇನೆ. ನನ್ನಿಂದ ಅನ್ಯಾಯ ಆಗಿದ್ದರೆ ಅದನ್ನು ಹೇಳಲು ಇಷ್ಟು ದಿನ ತೆಗೆದುಕೊಂಡಿದ್ದು ಯಾಕೆ? ನನ್ನ ಏಳಿಗೆ ಸಹಿಸದ ವ್ಯಕ್ತಿ ಹೀಗೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ನನ್ನ ಹಾಗೂ ವೈಷ್ಣವಿ ನಿಶ್ಚಿತಾರ್ಥ ನಡೆದಿಲ್ಲ. ನಡೆದಿರುವುದು ಬರೀ ಮಾತುಕತೆ ಶಾಸ್ತ್ರ ಅಷ್ಟೆ. ಈ ಫೋಟೊ ಹೇಗೆ ವೈರಲ್ ಆಯ್ತು ಗೊತ್ತಿಲ್ಲ ಎಂದು ಹೇಳಿದ್ದಾರೆ.