ಹೊಸದಿಗಂತ ಡಿಜಿಟಲ್ ಡೆಸ್ಕ್:
ತನ್ನ ಫ್ಯಾಷನ್ ಸೆನ್ಸ್‌ನಿಂದ ಯಾವಾಗಲೂ ಸುದ್ದಿಯಲ್ಲಿರುವ ಉರ್ಫಿ ಜಾವೇದ್ ಬಗ್ಗೆ ಕುತೂಹಲಕಾರಿ ಸಂಗತಿಯೊಂದು ಹರಿದಾಡುತ್ತಿದೆ. ಈ ಬಾರಿ ಆಕೆ ಸುದ್ದಿಯಾಗಿರುವುದು ಬಟ್ಟೆಯಿಂದಲ್ಲ, ಆಕೆ ಮದುವೆಯಾಗುತ್ತಿದ್ದಾರೆ ಎಂಬ ಗುಸುಗುಸು ಇದೀಗ ನೆಟ್‌ನಲ್ಲಿ ಭಾರೀ ಚರ್ಚೆಯಾಗುತ್ತಿದೆ.
ಯಾರಿಗೂ ತಿಳಿಯದಂತೆ ಉರ್ಫಿ ಜಾವೇದ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರಂತೆ. ಅದಕ್ಕೆ ಸಂಬಂಧಿಸಿದ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿವೆ. ಈ ಫೋಟೋಗಳಲ್ಲಿ, ಉರ್ಫಿ ಸಲ್ವಾರ್ ಸೂಟ್ ಧರಿಸಿ ವ್ಯಕ್ತಿಯೊಂದಿಗೆ ಪೂಜೆಯಲ್ಲಿ ಕುಳಿತಿದ್ದಾರೆ. ಫೋಟೋದಲ್ಲಿ ವ್ಯಕ್ತಿಯ ಮುಖವು ಅಸ್ಪಷ್ಟವಾಗಿದೆ. ಉರ್ಫಿ ಅವರಿಗೆ ಉಂಗುರ ಧರಿಸುತ್ತಿರುವುದು ಕಂಡುಬಂದಿದೆ.
ಈ ಫೋಟೋಗಳು ಹೊರಬಿದ್ದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸಿದೆ. ಆ ಫೋಟೋಗಳನ್ನು ನೋಡಿದ ಉರ್ಫಿ ಜಾವೇದ್ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ, ಉರ್ಫಿ ಜಾವೇದ್ ಅವರಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.