MUST READ | ಹೆಂಡತಿ ತವರು ಮನೆಗೆ ಹೋಗೋಕೆ ಮುಜುಗರ ಪಡ್ತೀರಾ? ಹಾಗಿದ್ರೆ ಇಲ್ಲೊಮ್ಮೆ ಕಣ್ಣಾಡಿಸಿ..

ಏನೇ ಆಗ್ಲಿ ಹೆಂಡತಿ ತವರು ಮನೆಯಲ್ಲಿ ಉಳಿದುಕೊಳ್ಳೋ ಸೀನ್ ಇಲ್ಲ, ಏನೋ ಒಂಥರಾ ಮುಜುಗರ, ನಾಚಿಕೆ, ಮಾವನ ಮನೆಯಲ್ಲಿ ಯಾರು ಉಳಿತಾರೆ ಎನ್ನುವ ಅಸಡ್ಯೆ, ಮಾವನ ಮನೆಯಲ್ಲಿದ್ದರೆ, ಮನೆ ಅಳಿಯ ಎಂದು ರೇಗಿಸುವ ಭಯ ಹೀಗೆ ಸಾಕಷ್ಟು ಕಾರಣಗಳಿಂದ ನೀವು ನಿಮ್ಮ ಹೆಂಡತಿಯ ತವರು ಮನೆಯಲ್ಲಿ ಉಳಿಯದೇ ಹೋಗಬಹುದು. ಆದರೆ ಒಮ್ಮೆ ಯೋಚನೆ ಮಾಡಿ, ನಿಮ್ಮ ಪತ್ನಿ ಅವಳ ತವರು ಮನೆಯನ್ನು ಬಿಟ್ಟು ನಿಮ್ಮ ಮನೆಗೆ ಜೀವನಕ್ಕಾಗುವಷ್ಟು ಗಂಟು ಮೂಟೆ ಹೊತ್ತುಕೊಂಡು ಬರುವಾಗ ನಿಮಗೆ ಮೂರು ದಿನ ಇರೋದಕ್ಕೆ ಕಷ್ಟವಾ?

Brisbane Family — What It Means - Brisbane Kidsನಿಮ್ಮ ಅತ್ತೆ ಮಾವನನ್ನು ಪ್ರೀತಿಯಿಂದ ಕಾಣಬೇಕು, ಇದು ನಿಮ್ಮ ಕರ್ತವ್ಯ, ಮದುವೆಯಾದ ತಕ್ಷಣ ಅವಳು ತವರು ಮನೆಯಿಂದ ಸಂಪೂರ್ಣ ದೂರಾಗಲಿ, ನಮ್ಮ ಮನೆ ಹೆಣ್ಣುಮಗಳು ಎಂದು ನೀವು ಹಕ್ಕು ಸಾಧಿಸಬಹುದು, ಆದರೆ ಇದರಿಂದ ನಿಮ್ಮಾಕೆ ಖುಷಿಯಾಗಿದ್ದಾಳಾ? ನೀವು ಸಕ್ಕರೆಯಂಥ ಪ್ರೀತಿ ತೋರಿದರೂ ಅವಳಿಗೆ ಅವಳ ತವರು ಮನೆಯೇ ಹೆಚ್ಚು ನೆನಪಿರಲಿ.

59 Best Family Quotes - I Love My Family Quotesಹೆಣ್ಣುಮಕ್ಕಳು ಹುಟ್ಟಿದಾಗಿನಿಂದ ಅವಲಂಬಿತರಾಗೋದು ಅವರ ತವರಿಗೆ, ಇಮ್ಯಾಜಿನ್ ಮಾಡಿ, ನಾನು  ಪೋಷಕರನ್ನು ಬಿಟ್ಟು ಬಂದಿದ್ದೇನೆ, ನೀವು ನಿಮ್ಮ ಪೋಷಕರನ್ನು ಬಿಟ್ಟು ಬನ್ನಿ. ನಾವಿಬ್ಬರೇ ಸೆಪರೇಟ್ ಆದ ಮನೆ ಮಾಡಿಕೊಂಡು ಇರೋಣ ಎಂದರೆ? ಇದಕ್ಕೆ ನಿಮಗೆ ಒಪ್ಪಿಗೆ ಇದೆಯಾ?

15 fun activities for when you visit your grandparents | Friends Care  Communityಆಕೆಯ ತವರು ಮನೆಯವರಿಗೂ ನಿಮ್ಮನ್ನು ಪ್ರೀತಿ ಮಾಡಲು ಅವಕಾಶ ನೀಡಿ, ಮಗನಂತೆ ನಡೆದುಕೊಳ್ಳುವ ಪ್ರಯತ್ನ ಮಾಡಿ. ಕೆಲವೊಮ್ಮೆ ನೀವು ಈ ರೀತಿ ಮಾಡುವುದರಿಂದ ನಿಮಗೆ ಲಾಭ ಹೆಚ್ಚಿದೆ. ಆಕೆಯ ತಂದೆ ತಾಯಿಯನ್ನು ಪ್ರೀತಿಯಿಂದ ಕಾಣೋದು, ಅವಳು ಹೇಳದೇ ನಿಮ್ಮ ತವರು ಮನೆಗೆ ಹೋಗೋಣ ಬಾ ಎನ್ನೋದ್ರಿಂದ ಆಕೆಗೆ ನಿಮ್ಮ ಮೇಲೆ ಪ್ರೀತಿ ಹಾಗೂ ಗೌರವ ಹೆಚ್ಚಾಗುತ್ತದೆ. ಇದು ನಿಮ್ಮ ಪೋಷಕರನ್ನು ಆಕೆ ನೋಡಿಕೊಳ್ಳುವ ರೀತಿ ಮೇಲೆ ಪರಿಣಾಮ ಬೀರುತ್ತದೆ. ನೀವು ಅವರ ತವರು ಮನೆ ದೂಷಿಸಿದರೆ, ನಿಮ್ಮ ಮನೆಯನ್ನು ಅವರು ದೂಷಿಸ್ತಾರೆ, ಇಲ್ಲಿಂದಲೇ ಜಗಳಗಳು ಆರಂಭವಾಗುತ್ತವೆ.

50 Grandmother Quotes To Show Grandma Some Loveನಿಮ್ಮ ತಂದೆತಾಯಿಯನ್ನು ಆಕೆ ಸ್ವಂತ ಎಂದು ಭಾವಿಸಿ ಪ್ರೀತಿಸುತ್ತಾಳೆ, ಅವಳ ತಂದೆ ತಾಯಿ ಬಗ್ಗೆ ನೀವೂ ಗಮನ ಹರಿಸಿ. ಹೆಂಡತಿ ತವರು ಮನೆಯನ್ನು ಪ್ರೀತಿಸೋದು, ಪದೇ ಪದೆ ಹೋಗಿ ಬರೋದಕ್ಕೆ ಎಂದಿಗೂ ಕಿರಿಕಿರಿ ಮಾಡಿಕೊಳ್ಳಬೇಡಿ. ಆಕೆಗೆ ನೀವು ಜೊತೆಯಾಗಿ ಆನಂತರ ನಿಮ್ಮ ಜೀವನ ಹೇಗೆ ಬದಲಾಗುತ್ತದೆ ನೋಡಿ..

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!