ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಬಿಗ್‌ಬಾಸ್ ಫೀವರ್ ಆರಂಭವಾಗುತ್ತಿದೆ, ಹಿಂದಿ, ತೆಲುಗು ಎಲ್ಲೆಡೆ ಬಿಗ್‌ಬಾಸ್ ಆರಂಭವಾಗುತ್ತಿದ್ದು, ಶೀಘ್ರದಲ್ಲಿಯೇ ಕನ್ನಡದಲ್ಲಿಯೂ ಬಿಗ್‌ಬಾಸ್ ಬರಲಿದೆ.
ಹಿಂದಿ ಬಿಗ್‌ಬಾಸ್ ಬಗ್ಗೆ ಇದೀಗ ಅಪ್‌ಡೇಟ್ ಒಂದು ಸಿಕ್ಕಿದೆ. ಈ ಬಾರಿಯ ಹಿಂದಿ ಬಿಗ್‌ಬಾಸ್ ಸೀಸನ್ 18 ಅಕ್ಟೋಬರ್ 5 ರಂದು ಶುರುವಾಗಲಿದೆ. ಹೀಗಾಗಿ ಸಾಕಷ್ಟು ಸ್ಟಾರ್ಸ್ಗಳ ಹೆಸರುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಈ ಬಾರಿಯ ಬಿಗ್‌ಬಾಸ್ ಸೀಸನ್ 18ಕ್ಕೆ ಕನ್ನಡದ ‘ಸೂರ್ಯವಂಶ’ ಸಿನಿಮಾದಲ್ಲಿ ನಟ ವಿಷ್ಣುವರ್ಧನ್ ಜೊತೆ ನಟಿಸಿದ್ದ ಇಶಾ ಕೋಪಿಕರ್ ಅವರು ಎಂಟ್ರಿ ಕೊಡಲಿದ್ದಾರೆ. ಈ ಬಗ್ಗೆ ಖುದ್ದು ಬಾಲಿವುಡ್ ನಟಿ ಇಶಾ ಕೋಪಿಕರ್ ಸಂದರ್ಶನವೊಂದರಲ್ಲಿ ಖಚಿತಪಡಿಸಿದ್ದಾರೆ. ಅದರಲ್ಲೂ ಸಲ್ಮಾನ್ ಖಾನ್ ಅವರ ಶೋನಲ್ಲಿ ಮೊದಲ ದೃಢಪಡಿಸಿದ ಸ್ಪರ್ಧಿಯಾಗಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಇಶಾ ಕೋಪಿಕರ್ ಅವರ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ನೆಚ್ಚಿನ ನಟಿಯನ್ನು, ನೆಚ್ಚಿನ ಶೋನಲ್ಲಿ ಕಣ್ತುಂಬಿಕೊಳ್ಳಬಹುದು ಎಂದು ಖುಷಿ ವ್ಯಕ್ತಪಡಿಸಿದ್ದಾರೆ.