ಹಮಾಸ್‌ನಿಂದ 50 ಒತ್ತೆಯಾಳುಗಳ ಬಿಡುಗಡೆ, 4 ದಿನಗಳ ಯುದ್ಧ ವಿರಾಮಕ್ಕೆ ಇಸ್ರೇಲ್‌ ಒಪ್ಪಿಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಹಮಾಸ್ ವಶದಲ್ಲಿರುವ 50 ಒತ್ತೆಯಾಳುಗಳ ಬಿಡುಗಡೆಗೆ ಪ್ರತಿಯಾಗಿ ಗಾಜಾದಲ್ಲಿ ನಾಲ್ಕು ದಿನಗಳ ಯುದ್ಧ ವಿರಾಮಕ್ಕೆ ಇಸ್ರೇಲ್‌ ಒಪ್ಪಿಗೆ ನೀಡಿದೆ.

ಇಸ್ರೇಲ್‌ ಮೊದಲ ಬಾರಿ ಕದನವಿರಾಮ ಘೋಷಿಸಿದ್ದು, ಇದು ಯುದ್ಧದ ಅಂತ್ಯವಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಮ್ಮ ಯುದ್ಧ ಕ್ಯಾಬಿನೆಟ್ ಕದನ ವಿರಾಮದ ಒಪ್ಪಂದದ ಮೇಲೆ ಮತ ಹಾಕುವ ಮುನ್ನ ಹೇಳಿದ್ದಾರೆ.

ಹಮಾಸ್ ನಿರ್ನಾಮ ಮಾಡುವವರೆಗೆ ಮತ್ತು ಒತ್ತೆಯಾಳುಗಳೆಲ್ಲರನ್ನು ಬಿಡುಗಡೆ ಮಾಡುವವರೆಗೆ ನಮ್ಮ ಯುದ್ಧ ನಿಲ್ಲಲ್ಲ ಎಂದು ನೆತನ್ಯಾಹು ತಿಳಿಸಿದ್ದಾರೆ.

ಕತಾರ್‌ನ ಅಧಿಕಾರಿಗಳು ಇಸ್ರೇಲ್ ಮತ್ತು ಹಮಾಸ್ ನಡುವಿನ ಒಪ್ಪಂದಕ್ಕೆ ಮಧ್ಯಸ್ಥಿಕೆ ವಹಿಸಿದ್ದಾರೆ. ಕದನ ವಿರಾಮ ಯಾವಾಗ ಜಾರಿಗೆ ಬರಲಿದೆ ಎಂಬುದು ಸ್ಪಷ್ಟವಾಗಿಲ್ಲ, ಆದರೆ ಗುರುವಾರದಿಂದ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬಹುದು.

ಬಿಡುಗಡೆಯಾದ ಪ್ರತಿ 10 ಒತ್ತೆಯಾಳುಗಳಿಗೆ ಹೆಚ್ಚುವರಿ ಒಂದು ದಿನದ ವಿರಾಮವನ್ನು ವಿಸ್ತರಿಸಲಾಗುವುದು ಎಂದು ಇಸ್ರೇಲಿ ಸರ್ಕಾರ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!