ಗಾಜಾದ ನಿರಾಶ್ರಿತರ ಶಿಬಿರದ ಮೇಲೆ ಮತ್ತೆ ಇಸ್ರೇಲ್ ವೈಮಾನಿಕ ದಾಳಿ, 19 ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಇಸ್ರೇಲ್​ ಗಾಜಾದ ನಿರಾಶ್ರಿತರ ಶಿಬಿರದ ಮೇಲೆ ವೈಮಾನಿಕ ದಾಳಿ ನಡೆಸಿದ್ದು, 19ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

ಕೇಂದ್ರ ಗಾಜಾದ ಅಲ್​-ಬುರೆಜಿ ಮತ್ತು ಅಲ್ ಮಘಾಝಿ ನಿರಾಶ್ರಿತರ ಶಿಬಿರದ ಮೇಲೆ ವೈಮಾನಿಕ ದಾಳಿ ನಡೆಸಲಾಗಿದೆ. ಈ ಪ್ರದೇಶದಲ್ಲಿರುವ ಕ್ಲಿನಿಕ್​ನ ಹೊರಭಾಗಕ್ಕೆ 4 ಶೆಲ್​ಗಳು ಬಂದು ಅಪ್ಪಳಿಸಿವೆ ಇದರಿಂದಾಗಿ 19 ಮಂದಿ ಮೃತಪಟ್ಟಿದ್ದಾರೆ, ಲೆಕ್ಕವಿಲ್ಲದಷ್ಟು ಮಂದಿ ಗಾಯಗೊಂಡಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ.

ಹಮಾಸ್​ ಉಗ್ರರು ಅಕ್ಟೋಬರ್​ 7ರಂದು ಇಸ್ರೇಲ್​ನ ದಕ್ಷಿಣ ಭಾಗದಲ್ಲಿ ದಾಳಿ ನಡೆಸಿ 1,200 ಮಂದಿಯನ್ನು ಹತ್ಯೆ ಮಾಡಿದ್ದರು. ಜತೆಗೆ 250ಕ್ಕೂ ಹೆಚ್ಚು ಮಂದಿಯನ್ನು ಅಪಹರಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!