ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ರೇಲ್ನಿಂದ ಗಾಜಾದ ಶಾಲೆ, ಮನೆಗಳ ಮೇಲೆ ವೈಮಾನಿಕ ದಾಳಿ ನಡೆದಿದ್ದು, 34 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಗಾಜಾದ ಶಾಲೆ ಹಾಗೂ ಮನೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. 19 ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 34 ಜನರು ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ಸತ್ತವರಲ್ಲಿ ಆರು ಸಿಬ್ಬಂದಿ ಸೇರಿದ್ದಾರೆ ಎಂದು ಯುಎನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗಾಜಾದಲ್ಲಿ ಕಳೆದ 11 ತಿಂಗಳಿನಿಂದ ಯುದ್ಧದ ವಾತಾವರಣವಿದೆ, ಇಸ್ರೇಲ್ ಹಾಗೂ ಹಮಾಸ್ ಉಗ್ರರ ಕದನಕ್ಕೆ ವಿರಾಮ ಹಾಕಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಿದ್ದರೂ, ಅವರ ಬೇಡಿಕೆ ಸ್ವೀಕಾರಾರ್ಹವಲ್ಲವಾದ್ದರಿಂದ ಯುದ್ಧ ಮುಂದುವರೆದಿದೆ.
ಮೃತ ಮಕ್ಕಳಲ್ಲಿ ಒಬ್ಬಳನ್ನು ಗಾಜಾದ ನಾಗರಿಕ ರಕ್ಷಣಾ ಸಂಸ್ಥೆಯ ಸದಸ್ಯ ಮೊಮಿನ್ ಸೆಲ್ಮಿ ಅವರ ಪುತ್ರಿ ಎಂದು ಗುರುತಿಸಲಾಗಿದೆ. ಸೆಲ್ಮಿ ತನ್ನ ಮಗಳನ್ನು 10 ತಿಂಗಳುಗಳವರೆಗೆ ನೋಡಿರಲಿಲ್ಲ, ಏಕೆಂದರೆ ಅವರು ಉತ್ತರ ಗಾಜಾದಲ್ಲಿ ಉಳಿದುಕೊಂಡಿದ್ದರು ಮತ್ತು ಅವನ ಕುಟುಂಬವು ದಕ್ಷಿಣ ಭಾಗದಲ್ಲಿತ್ತು.