ಇಸ್ರೇಲ್-ಇರಾನ್ ಕದನ: ಟೆಲ್ ಅವಿವ್‌ಗೆ ಸದ್ಯಕ್ಕಿಲ್ಲ ಏರ್ ಇಂಡಿಯಾ ಹಾರಾಟ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಸ್ರೇಲ್ ಮತ್ತು ಇರಾನ್ (Israel and Iran) ನಡುವಿನ ಕದನದಿಂದ ಉದ್ವಿಗ್ನತೆ ಹೆಚ್ಚಾಗಿದ್ದು, ಈ ಹಿನ್ನೆಲೆ ಏಪ್ರಿಲ್ 30 ರವರೆಗೆ ಏರ್‌ ಇಂಡಿಯಾ ಟೆಲ್ ಅವಿವ್‌ಗೆ (Tel Aviv) ಮತ್ತು ಅಲ್ಲಿಂದ ಬರುವ ಎಲ್ಲಾ ವಿಮಾನಗಳನ್ನು ಸ್ಥಗಿತಗೊಳಿಸಿದೆ.

ಈ ಸಂಬಂಧ ಮಾಹಿತಿ ಹಂಚಿಕೊಂಡಿರುವ ಏರ್‌ ಇಂಡಿಯಾ (Air India), ಮಧ್ಯಪ್ರಾಚ್ಯದಲ್ಲಿನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಟೆಲ್ ಅವೀವ್‌ಗೆ ಮತ್ತು ಅಲ್ಲಿಂದ ಹೊರಡುವ ನಮ್ಮ ವಿಮಾನಗಳನ್ನು 30 ಏಪ್ರಿಲ್ ರವರೆಗೆ ಸ್ಥಗಿತಗೊಳಿಸಲಾಗುವುದು. ನಾವು ನಿರಂತರವಾಗಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಈ ಸಮಯದಲ್ಲಿ ಟೆಲ್ ಅವಿವ್‌ಗೆ ಮತ್ತು ಅಲ್ಲಿಂದ ಪ್ರಯಾಣಕ್ಕಾಗಿ ಬುಕಿಂಗ್‌ಗಳನ್ನು ದೃಢಪಡಿಸಿದ ನಮ್ಮ ಪ್ರಯಾಣಿಕರಿಗೆ ಬೆಂಬಲವನ್ನು ನೀಡುತ್ತಿದ್ದೇವೆ. ಏರ್ ಇಂಡಿಯಾದಲ್ಲಿ ನಮ್ಮ ಗ್ರಾಹಕರು ಮತ್ತು ಸಿಬ್ಬಂದಿಯ ಸುರಕ್ಷತೆಯು ಮೊದಲ ಆದ್ಯತೆಯಾಗಿದೆ ಎಂದು ತಿಳಿಸಿದೆ.

ಕಳೆದ ಭಾನುವಾರವಷ್ಟೇ ಏರ್ ಇಂಡಿಯಾ ಅಧಿಕಾರಿಯೊಬ್ಬರು ದೆಹಲಿ ಮತ್ತು ಟೆಲ್ ಅವೀವ್ ನಡುವಿನ ನೇರ ವಿಮಾನಗಳನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!