ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ಯಾಲೆಸ್ತೀನ್‌ನ ಗಾಜಾದಲ್ಲಿರುವ ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ನಡೆಸಿದ್ದು, ಇದಕ್ಕೆ ಪ್ರತಿಯಾಗಿ, ಗಾಜಾ ಮೇಲೆ ವಾಯುದಾಳಿ ನಡೆಸಿದ ಇಸ್ರೇಲ್ ಈಗಾಗಲೇ 200 ಜನರನ್ನು ಕೊಂದಿದೆ ಎಂದು ತಿಳಿದುಬಂದಿದೆ.
ಗಾಜಾಪಟ್ಟಿಯಲ್ಲಿರುವ ಹಮಾಸ್ ಉಗ್ರರ ಕಟ್ಟಡಗಳ ಮೇಲೆ ಇಸ್ರೇಲ್‌ನ ರಾಕೆಟ್‌ಗಳು ದಾಳಿ ನಡೆಸಿವೆ. ಸುಮಾರು 12ಕ್ಕೂ ಅಧಿಕ ರಾಕೆಟ್‌ಗಳ ಮೂಲಕ ಹಮಾಸ್ ಉಗ್ರರಿಗೆ ಇಸ್ರೇಲ್ ತಕ್ಕ ಪಾಠ ಕಲಿಸಿದೆ.
ಹಮಾಸ್ ಉಗ್ರರ ಮೇಲೆ ಇಸ್ರೇಲ್ ಸಾರಿರುವ ಸಮರಕ್ಕೆ ಆಪರೇಷನ್ ಸ್ವೊರ್ಡ್ಸ್ ಆಫ್ ಐರನ್ (Operation Swords Of Iron) ಎಂದು ಹೆಸರಿಟ್ಟಿದೆ.
ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ 200ಕ್ಕೂ ಅಧಿಕ ಪ್ಯಾಲೆಸ್ತೀನಿಯರು ಮೃತಪಟ್ಟರೆ, 1,600ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅಷ್ಟೇ ಅಲ್ಲ, ಇಸ್ರೇಲ್ ದಾಳಿಗೆ ಹಮಾಸ್ ಉಗ್ರರ ಮೂರು ನೆಲೆಗಳು ಧ್ವಂಸಗೊಂಡಿವೆ. ಅವರ ಬೃಹತ್ ಕಟ್ಟಡಗಳು ಧರೆಗುರುಳಿವೆ.
ಇಸ್ರೇಲ್‌ನಲ್ಲಿ ಮೃತರ ಸಂಖ್ಯೆ 100ಕ್ಕೆ ಏರಿಕೆ
ಇಸ್ರೇಲ್ ಮೇಲೆ ಪ್ಯಾಲೆಸ್ತೀನ್‌ನಲ್ಲಿರುವ ಗಾಜಾಪಟ್ಟಿಯ ಹಮಾಸ್ ಉಗ್ರರು ಮುಗಿಬಿದ್ದಿದ್ದಾರೆ. ಸುಮಾರು 5 ಸಾವಿರ ರಾಕೆಟ್‌ಗಳಿಂದ ಇಸ್ರೇಲ್ ಮೇಲೆ ದಾಳಿ ನಡೆಸಲಾಗಿದೆ. ಹಮಾಸ್ ಉಗ್ರರು ಇಸ್ರೇಲ್‌ನ ಬೀದಿ ಬೀದಿಗಳಲ್ಲಿ ಗುಂಡಿನ ದಾಳಿ ನಡೆಸುತ್ತಿದ್ದಾರೆ. ಹಮಾಸ್ ಉಗ್ರರ ದಾಳಿಗೆ ಇಸ್ರೇಲ್‌ನ 100 ಜನ ಮೃತಪಟ್ಟಿದ್ದು, ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.