ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಪ್ರಕಾಶ್ ರಾಜ್ (Prakash Raj)ರಿ ರಕ್ಷಿತ್ ಶೆಟ್ಟಿ ನಟನೆಯ ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ನೋಡಿ ಸಂಭ್ರಮಿಸಿದ್ದಾರೆ.
ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಸಿನಿಮಾ ಬಗ್ಗೆ, ‘ಸಪ್ತ ಸಾಗರದಾಚೆ ಎಲ್ಲೋ.. ಆಹಾ.. ಒಂದು ಸುಂದರ ದೃಶ್ಯಕಾವ್ಯ ಅನುಭವ. ಡೋಂಟ್ ಮಿಸ್’ ಎಂದು ಬರೆದುಕೊಂಡಿದ್ದಾರೆ.
“ಸಪ್ತ ಸಾಗರದಾಚೆ ಎಲ್ಲೋ “.. ಆಹಾ!! ಒಂದು ಸುಂದರ .. ಹ್ರದಯಸ್ಪರ್ಶಿ ಅನುಭವ .. don’t miss . thank you @hemanthrao11 @rakshitshetty @AdvaithaAmbara @rukminitweets @Chaithra_Achar_ @charanrajmr2701 pic.twitter.com/lzyc2NytXL
— Prakash Raj (@prakashraaj) October 6, 2023
ರಕ್ಷಿತ್ ಶೆಟ್ಟಿ, ನಿರ್ದೇಶಕ ಹೇಮಂತ್ ರಾವ್, ಚೈತ್ರಾ ಆಚಾರ್ಯ, ರುಕ್ಮಿಣಿ, ಚರಣ್ ರಾಜ್ ಹೀಗೆ ಸಿನಿಮಾದ ಕಲಾವಿದರು ಮತ್ತು ತಂತ್ರಜ್ಞರಿಗೆ ತಮ್ಮ ಬರಹವನ್ನು ಟ್ಯಾಗ್ ಮಾಡಿದ್ದಾರೆ. ಇಡೀ ತಂಡಕ್ಕೆ ಇಂಥದ್ದೊಂದು ಸಿನಿಮಾ ಕೊಟ್ಟಿದ್ದಕ್ಕೆ ಧನ್ಯವಾದಗಳನ್ನೂ ಪ್ರಕಾಶ್ ರಾಜ್ ಅರ್ಪಿಸಿದ್ದಾರೆ.
ಪಾರ್ಟ್ 2 ಯಾವಾಗ?
ರಕ್ಷಿತ್ ಶೆಟ್ಟಿ ನಟಿಸಿರುವ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ತೆಲುಗಿನಲ್ಲೂ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ. ಈ ಬೆನ್ನಲ್ಲೇ ‘ಬಿ ಪಾರ್ಟ್’ ಅನ್ನು ಅದ್ಧೂರಿಯಾಗಿ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿತ್ತು. ಚಿತ್ರತಂಡ ಮೊದಲೇ ಘೋಷಿಸಿದಂತೆ ಅಕ್ಟೋಬರ್ 20ಕ್ಕೆ ಬಿಡುಗಡೆ ಆಗಬೇಕಿತ್ತು. ಬಿ ಪಾರ್ಟ್ ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದರು. ಆದರೆ, ನಿಗದಿತ ದಿನಾಂಕದಲ್ಲಿ ಸಿನಿಮಾ ರಿಲಿಸ್ ಆಗುತ್ತಿಲ್ಲ. ಹಾಗಾಗಿ ಸಹಜವಾಗಿಯೇ ಅಭಿಮಾನಿಗಳಿಗೆ ನಿರಾಸೆ ಮೂಡಿದೆ.