ದಕ್ಷಿಣ ಲೆಬನಾನ್​ನ ಹಿಜ್ಬುಲ್ಲಾಗಳ 40 ನೆಲೆಗಳ ಮೇಲೆ ಇಸ್ರೇಲ್​ ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ದಕ್ಷಿಣ ಲೆಬನಾನ್​ನಲ್ಲಿರುವ ಹಿಜ್ಮುಲ್ಲಾ ನೆಲೆಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್‌ ದಾಳಿ ನಡೆಸಿದೆ. ಇತ್ತೀಚೆಗಷ್ಟೇ ಇರಾನ್ ಇಸ್ರೇಲ್​ ಮೇಲೆ ಕ್ಷಿಪಣಿಗಳ ದಾಳಿ ನಡೆಸಿತ್ತು. ಇದಾದ ಬಳಿಕ ಇಸ್ರೇಲ್​ ಕೂಡ ಇರಾನ್​ ಮೇಲೆ ಪ್ರತಿದಾಳಿ ನಡೆಸಿತ್ತು. ಇದೀಗ ಮತ್ತೆ ಇಸ್ರೇಲ್​ ಹಿಜ್ಮುಲ್ಲಾ ನೆಲೆಗಳ ಮೇಲೆ ದಾಳಿ ನಡೆಸಿದೆ, ಇಸ್ರೇಲ್​ನ ಭದ್ರತಾ ಪಡೆಯ ಯುದ್ಧ ವಿಮಾನಗಳು ದಕ್ಷಿಣ ಲೆಬನಾನ್​ನ ಹಿಜ್ಬುಲ್ಲಾಗಳ 40 ನೆಲೆಗಳ ಮೇಲೆ ದಾಳಿ ನಡೆಸಿದೆ.

ಇದರ ನಡುವೆ ಇಸ್ರೇಲ್​ ಗಡಿ ಸಮೀಪವಿರುವ ಗ್ರಾಮವೊಂದರ ಮೇಲೆ 20ಕ್ಕೂ ಅಧಿಕ ಕ್ಷಿಪಣಿಗಳ ದಾಳಿ ನಡೆಸಲಾಗಿದೆ ಎಂದು ಹಿಜ್ಬುಲ್ಲಾ ಮೂಲಗಳು ತಿಳಿಸಿವೆ.ದಕ್ಷಿಣ ಲೆಬನಾನ್‌ನಲ್ಲಿ ಮತ್ತು ಲೆಬನಾನ್‌ನ ಇತರ ಭಾಗಗಳಲ್ಲಿ ಇಸ್ರೇಲಿ ಮಿಲಿಟರಿ ಪಡೆಗಳು ನಿರಂತರ ಆಕ್ರಮಣ ಮಾಡುತ್ತಿವೆ.

ದಕ್ಷಿಣ ಲೆಬನಾನ್‌ನಲ್ಲಿ ಅರ್ಧದಷ್ಟು ಹಿಜ್ಬುಲ್ಲಾದ ಕಮಾಂಡರ್‌ಗಳನ್ನು ಇಸ್ರೇಲಿ ಪಡೆಗಳು ಹತ್ಯೆ ಮಾಡಿದ್ದಾರೆ. ಇಸ್ರೇಲಿ ಪಡೆಗಳು ಅಕ್ಟೋಬರ್​ನಿಂದ ಲೆಬನಾನ್​ನಲ್ಲಿ ಸುಮಾರು 250 ಹಿಜ್ಬುಲ್ಲಾ ಹೋರಾಟಗಾರರನ್ನು ಕೊಂದಿದ್ದಾರೆ. ನೆರೆಯ ಸಿರಿಯಾದಲ್ಲಿ ಇಸ್ರೇಲಿ ದಾಳಿಗಳಲ್ಲಿ ಇನ್ನೂ 30 ಮಂದಿ ಮೃತಪಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!