ಕದನ ವಿರಾಮ ಮುಗಿಯುತ್ತಿದ್ದಂತೆಯೇ ಗಾಜಾ ಮೇಲೆ ಇಸ್ರೇಲ್ ದಾಳಿ : 175 ಜನರ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಾತ್ಕಾಲಿಕ ಕದನ ವಿರಾಮದ ನಂತರ ಇದೀಗ ಇಸ್ರೇಲ್- ಹಮಾಸ್ ಘರ್ಷಣೆ ಮತ್ತೆ ಆರಂಭವಾಗಿದೆ.
ಶುಕ್ರವಾರ ಇಸ್ರೇಲ್ ನಡೆಸಿದ ದಾಳಿಯಲ್ಲಿ 175 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

ಬಿಡುಗಡೆ ಮಾಡಲಿರುವ ಒತ್ತೆಯಾಳುಗಳ ಲಿಸ್ಟ್‌ನ್ನು ಬೆಳಗ್ಗೆ ಏಳು ಗಂಟೆಯೊಳಗೆ ಹಮಾಸ್ ಇಸ್ರೇಲ್‌ಗೆ ನೀಡಬೇಕಿತ್ತು. ಆದರೆ ಹಮಾಸ್ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ, ಅಷ್ಟೇ ಅಲ್ಲದೆ ಕದನ ವಿರಾಮ ಉಲ್ಲಂಘನೆ ಮಾಡಿ ರಾಕೆಟ್ ಹಾರಿಸಿದೆ ಎಂದೂ ಇಸ್ರೇಲ್ ರಕ್ಷಣಾ ಪಡೆ ಆರೋಪಿಸಿತ್ತು.

ದಾಳಿಯ ಬಗ್ಗೆ ಗಾಜಾಪಟ್ಟಿಯ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ಹಮಾಸ್ ಉಗ್ರರ ವಿರುದ್ಧ ದಾಳಿಯನ್ನು ಇಸ್ರೇಲ್ ಮತ್ತೆ ಪ್ರಾರಂಭಿಸಿದೆ. ಈ ಬಾರಿ ದಾಳಿಯಲ್ಲಿ ಹೆಚ್ಚಿನ ಪಕ್ಷ ಮಹಿಳೆಯರು ಹಾಗೂ ಮಕ್ಕಳೇ ಮೃತಪಟ್ಟಿದ್ದಾರೆ ಎಂದು ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!