ಭಯೋತ್ಪಾದನಾ ಕೃತ್ಯಕ್ಕೆ ಯತ್ನಿಸಿದ ದಾಳಿಕೋರನ ಹುಟ್ಟಡಗಿಸಿದ ಇಸ್ರೇಲಿ ಪೊಲೀಸರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಸ್ರೇಲ್‌ನ ಟೆಲ್ ಅವೀವ್ ಪೊಲೀಸರು ಕಾರು ಹರಿಸಿ ಸಾಮಾನ್ಯ ಜನರ ಜೀವ ತೆಗೆದ ಭಯೋತ್ಪಾದಕನನ್ನು ಶುಕ್ರವಾರ ರಾತ್ರಿ ಗುಂಡಿಕ್ಕಿ ಕೊಂದಿದ್ದಾರೆ. ಭಯೋತ್ಪಾದಕನ ಹೇಯ ಕೃತ್ಯಕ್ಕೆ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಆರು ಮಂದಿ ಗಂಭೀರ ಗಾಯಗೊಂಡಿರುವುದಾಗಿ ಟೈಮ್ಸ್ ಆಫ್ ಇಸ್ರೇಲ್ (ToI) ವರದಿ ಮಾಡಿದೆ.

“ಟೆಲ್ ಅವಿವ್ ಪೊಲೀಸರು ಕಾರನ್ನು ಸಮೀಪಿಸಿ ಭಯೋತ್ಪಾದಕ ತನ್ನ ಬಳಿಯಿದ್ದ ಆಯುಧವನ್ನು ತೆಗೆಯುವುದನ್ನು ಗಮನಿಸಿ ಕೂಡಲೇ ಗುಂಡು ಹಾರಿಸಿದ್ದಾರೆಂದು” ವರದಿಯಾಗಿದೆ.

ಜನಪ್ರಿಯ ಕಡಲತೀರದ ಉದ್ಯಾನವನದ ಬಳಿ ಜನರ ಗುಂಪಿನ ಮೇಲೆ ಕಾರು ಹರಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಪೊಲೀಸರು ದಾಳಿಕೋರನ ಉದ್ದೇಶ ಮತ್ತು ಹಿನ್ನೆಲೆಯನ್ನು ಪರಿಶೀಲಿಸುತ್ತಿದ್ದಾರೆ ಮತ್ತು ಸಾಕ್ಷ್ಯಕ್ಕಾಗಿ ಪ್ರದೇಶವನ್ನು ಹುಡುಕುತ್ತಿದ್ದಾರೆ.

ಆನ್‌ಲೈನ್‌ನಲ್ಲಿ ಪ್ರಸಾರವಾಗುವ ತಪ್ಪು ಮಾಹಿತಿಗಳ ವಿರುದ್ಧ ಪೊಲೀಸರು ಎಚ್ಚರಿಸಿದ್ದಾರೆ. ಶಂಕಿತ ದಾಳಿಕೋರನು ಇಸ್ರೇಲಿ ಪಟ್ಟಣವಾದ ಕ್ಫರ್ ಖಾಸೆಮ್‌ನವನು ಎಂದು ಬಹು ವರದಿಗಳು ಹೇಳುತ್ತವೆ. ಶಂಕಿತ ವ್ಯಕ್ತಿ ಟೆಲ್ ಅವಿವ್‌ನಲ್ಲಿ ಕೆಲಸ ಮಾಡುತ್ತಿದ್ದಾನೆ ಎನ್ನಲಾಗಿದೆ.

ಟೆಲ್ ಅವಿವ್‌ನಲ್ಲಿ ಇಂದು ನಡೆದ ಭಯೋತ್ಪಾದಕ ದಾಳಿಗೆ ಬಲಿಯಾದವರೆಲ್ಲರೂ ಪ್ರವಾಸಿಗರು ಎಂದು ಮ್ಯಾಗೆನ್ ಡೇವಿಡ್ ಆಡಮ್ ತುರ್ತು ಸೇವೆ ಹೇಳಿದೆ.

ಇದಲ್ಲದೆ, ಶುಕ್ರವಾರ ಉತ್ತರ ವೆಸ್ಟ್ ಬ್ಯಾಂಕ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಇಸ್ರೇಲಿ-ಬ್ರಿಟಿಷ್ ಸಹೋದರಿಯರು ಸಾವನ್ನಪ್ಪಿದರು. ಇಸ್ರೇಲ್ ಮತ್ತು ಆಕ್ರಮಿತ ಪ್ಯಾಲೇಸ್ಟಿನಿಯನ್ ಪ್ರಾಂತ್ಯಗಳಲ್ಲಿ ಈಗಾಗಲೇ ಉದ್ವಿಗ್ನ ವಾತಾವರಣ ಮನೆಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!