ಇಸ್ರೇಲ್-ಹಮಾಸ್‌ ಸಂಘರ್ಷ: ತಾಯ್ನಾಡಿಗಾಗಿ ರಣರಂಗಕ್ಕಿಳಿದ ಇಸ್ರೇಲಿ ಧಾರಾವಾಹಿ ನಟ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಸ್ರೇಲಿ ಧಾರಾವಾಹಿ ನಟ ಲಿಯರ್ ರಾಜ್ ಯುದ್ಧಕಣಕ್ಕೆ ಪ್ರವೇಶಿಸಿದ್ದಾರೆ. ಹಮಾಸ್ ಭಯೋತ್ಪಾದಕರು ಇಸ್ರೇಲ್ ಮೇಲೆ ದಾಳಿಯಿಟ್ಟಾಗಿನಿಂದ ತಾಯ್ನಾಡಿಗೆ ಹೋರಾಡುತ್ತಿದ್ದಾರೆ. ಹಮಾಸ್‌ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ನಟ ʻಬ್ರದರ್ಸ್ ಇನ್ ಆರ್ಮ್ಸ್ʼ ಸ್ವಯಂಸೇವಕ ಗುಂಪಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ʻಫೌಡಾʼ ಎಂಬ ದೂರದರ್ಶನ ಸರಣಿಯಲ್ಲಿ ನಾಯಕನಾಗಿ ನಟಿಸಿದ್ದಾರೆ.

ಇಸ್ರೇಲ್ ಡೆಮಾಕ್ರಸಿ ಇನ್ಸ್ಟಿಟ್ಯೂಟ್ ಅಧ್ಯಕ್ಷ ಯೋಹಾನನ್ ಪ್ಲೆಸ್ನರ್ ಮತ್ತು ಪತ್ರಕರ್ತ ಅವಿ ಯಿಸ್ಸಾಚರೋವ್ ಅವರೊಂದಿಗೆ ಯುದ್ಧಭೂಮಿಯಲ್ಲಿರುವ ವಿಡಿಯೋವನ್ನು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ಯೋಹಾನನ್ ಪ್ಲೆಸ್ನರ್ ಹಾಗೂ ಅವಿ ಹಾಗೂ ಬ್ರದರ್ಸ್ ಇನ್ ಆರ್ಮ್ಸ್ ಸ್ವಯಂಸೇವಕರೊಂದಿಗೆ ಯುದ್ಧಭೂಮಿಯಲ್ಲಿ ದಣಿವಿನ ಅರಿವಿಲ್ಲದೆ ಕೆಲಸ ಮಾಡುತ್ತಿರುವುದಕ್ಕೆ ಹೆಮ್ಮೆಯಿದೆ” ಎಂದು ನಟ ಬರೆದುಕೊಂಡಿದ್ದಾರೆ.

ಬಾಂಬ್ ದಾಳಿ ನಡೆದ ಸ್ಟೆರೋಟ್ ಟೌನ್‌ಗೆ ಹೋಗಿ ಯುದ್ಧದಲ್ಲಿ ಭಾಗಿಯಾಗಿರುವುದಾಗಿ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!