ಸಿರಿಯಾ ಮೇಲೆ ಏರ್‌ ಸ್ಟ್ರೈಕ್‌ ನಡೆಸಿ ನಾಲ್ವರು ಸೈನಿಕರನ್ನು ಕೊಂದ ಇಸ್ರೇಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಸಿರಿಯಾದ ಮಧ್ಯ ಮತ್ತು ಕರಾವಳಿ ಪ್ರದೇಶಗಳ ಕೇಂದ್ರೀಕರಿಸಿ ಶನಿವಾರ ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ ನಾಲ್ವರು ಸೈನಿಕರು ಸಾವನ್ನಪ್ಪಿ ಒಬ್ಬರು ಗಾಯಗೊಂಡಿದ್ದಾರೆ ಎಂದು ಸಿರಿಯನ್ ಮಿಲಿಟರಿ ತಿಳಿಸಿದೆ.
ಮೆಡಿಟರೇನಿಯನ್ ಸಾಗರ ಪ್ರದೇಶದಿಂದ ಹಾರಿಬಂದ ಇಸ್ರೇಲಿ ಯುದ್ಧವಿಮಾನಗಳು ಸಿರಿಯಾದಲ್ಲಿನ ಮಿಲಿಟರಿ ಸ್ಥಾನಗಳ ಕಡೆಗೆ ಕ್ಷಿಪಣಿಗಳನ್ನು ಹಾರಿಸಿದವು ಎಂದು ಸಿರಿಯನ್ ಮಿಲಿಟರಿ ಅಧಿಕಾರಿಯೊಬ್ಬರ ಹೇಳಿಕೆ ಉಲ್ಲೇಖಿಸಿ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಸಿರಿಯಾ ನಿಯಂತ್ರಿತ ಭಾಗಗಳೊಳಗಿನ ಗುರಿಗಳ ಮೇಲೆ ಇಸ್ರೇಲ್ ನೂರಾರು ಏರ್ ಸ್ಟ್ರೈಕ್‌ಗಳನ್ನು ನಡೆಸಿದೆ. ಇರಾನ್-ಮಿತ್ರ ಉಗ್ರಗಾಮಿ ಗುಂಪುಗಳ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆದಿದೆ ಎಂದು ಇಸ್ರೇಲ್ ಒಪ್ಪಿಕೊಂಡಿದೆ.
ನವೆಂಬರ್ 13 ರಂದು, ಶಾಯರತ್ ವಾಯುನೆಲೆಯನ್ನು ಗುರಿಯಾಗಿಟ್ಟುಕೊಂಡು ಮಧ್ಯ ಸಿರಿಯಾದ ಮೇಲೆ ಇಸ್ರೇಲಿ ನಡೆಸಿದ ದಾಳಿಯಲ್ಲಿ ಇಬ್ಬರು ಸೈನಿಕರು ಸಾವನ್ನಪ್ಪಿ ಮೂವರು ಗಾಯಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!