ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಾಜಾಪಟ್ಟಿಯ ನಿರಾಶ್ರಿತರ ಶಿಬಿರದಲ್ಲಿ ಇಸ್ರೇಲ್ ಸೇನೆ ಕಾರ್ಯಾಚರಣೆ ನಡೆಸಿದ್ದು, ಈ ಸಂದರ್ಭದಲ್ಲಿ ಭಾರೀ ಸಂಘರ್ಷ ಉಂಟಾಗಿದೆ.
ವಾಯುವ್ಯ ಸಮಾರಿಯಾದಲ್ಲಿರುವ ನೂರ್ ಶಮ್ಸ್ ನಿರಾಶ್ರಿತ ಶಿಬಿರದಲ್ಲಿ ಶಸ್ತ್ರಸಜ್ಜಿತ ಹಮಾಸ್ ಉಗ್ರರು ಇಸ್ರೇಲ್ ಸೇನೆಯ ವಿರುದ್ಧ ತೀವ್ರ ಗುಂಡಿನ ದಾಳಿ ಮಾಡಿದ್ದಾರೆ.
ಇಸ್ರೇಲಿ ಪಡೆಗಳು ಹಮಾಸ್ ಉಗ್ರರ ವಿರುದ್ಧ ಗುಂಡಿನ ಚಕಮಕಿ ಆರಂಭಿಸಿದ್ದಾರೆ. ಹೆಲಿಕಾಪ್ಟರ್ ಗನ್‌ಶಿಪ್ ಬಳಕೆಯನ್ನೂ ಮಾಡಲಾಗಿದೆ. ಈ ಪ್ರದೇಶದಲ್ಲಿ ಹಮಾಸ್‌ನ ಮೋಸ್ಟ್ ವಾಂಟೆಂಡ್ ಉಗ್ರರು ಇದ್ದಾರೆ ಎನ್ನಲಾಗಿದೆ.
ಈಗಾಗಲೇ ಇಸ್ರೇಲ್ ಪಡೆಗಳು ಹಮಾಸ್‌ನ ಐವರು ವಾಂಟೆಡ್ ಶಂಕಿತ ಉಗ್ರರನ್ನು ಬಂಧಿಸಿದ್ದಾರೆ. ಒಟ್ಟಾರೆ 80 ಶಂಕಿತರನ್ನು ಬಂಧಿಸಲಾಗಿದೆ.